ಸಾಂಕ್ರಾಮಿಕದ ನಡುವೆ ಚುನಾವಣೆಗೆ ಹೊಸ ಮಾರ್ಗಸೂಚಿಗಳು ಬಿಡುಗಡೆ

0
147
Tap to know MORE!

ಕೋವಿಡ್ -19 ಸಾಂಕ್ರಾಮಿಕ ಭೀತಿಯ ನಡುವೆಯೂ, ಚುನಾವಣೆ ನಡೆಸಲು ಚುನಾವಣಾ ಆಯೋಗ ಇಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜಕೀಯ ಪಕ್ಷಗಳು ಸೇರಿದಂತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿದ ಸಲಹೆಗಳನ್ನು ಪರಿಗಣಿಸಿದ ನಂತರ ಆಯೋಗವು ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಆಯೋಗವು ಅನುಮತಿ ನೀಡಿದರೂ, 5ಕ್ಕೂ ಅಧಿಕ ಮಂದಿ ಒಟ್ಟಿಗೆ ಹೋಗುವಂತಿಲ್ಲ. ಇದಲ್ಲದೆ, ಅಭ್ಯರ್ಥಿಗಳು ರೋಡ್‌ಶೋ ಸಂದರ್ಭ, ಒಟ್ಟು ಐದು ವಾಹನಗಳಿಗೆ ಸೀಮಿತಗೊಳಿಸಬೇಕು.

ಸಾಂಕ್ರಾಮಿಕ ಸಮಯದಲ್ಲಿ ಚುನಾವಣೆ ನಡೆಸಲು ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಅಗತ್ಯ ಮಾರ್ಗಸೂಚಿಗಳ ಸಲಹೆ ಸೂಚನೆಗಳನ್ನು ನೀಡಬಹುದು ಎಂದು ಚುನಾವಣಾ ಆಯೋಗ ಕಳೆದ ತಿಂಗಳು ಕೇಳಿಕೊಂಡಿತ್ತು.

ಇತರ ಮುಖ್ಯಾಂಶಗಳು ಇಲ್ಲಿವೆ:

  • ನಾಮನಿರ್ದೇಶನ ಸಮಯದಲ್ಲಿ ಅಭ್ಯರ್ಥಿಯೊಂದಿಗೆ ಕೇವಲ ಇಬ್ಬರು ವ್ಯಕ್ತಿಗಳು ಬರಬಹುದು.
  • ಮತದಾರನು ಮತದಾನದ ದಿನದಂದು ಸೋಂಕಿನ ಲಕ್ಷಣಗಳನ್ನು ತೋರಿಸಿದರೆ, ಆ ವ್ಯಕ್ತಿಗೆ ಟೋಕನ್ ನೀಡಲಾಗುವುದು ಮತ್ತು ಮತದಾನದ ಕೊನೆಯ ಗಂಟೆಯಲ್ಲಿ ಮತದಾನಕ್ಕೆ ಬರುವಂತೆ ಕೇಳಲಾಗುತ್ತದೆ.
  • ರಿಜಿಸ್ಟರ್‌ಗೆ ಸಹಿ ಮಾಡುವಾಗ ಮತ್ತು ಇವಿಎಂ ಗುಂಡಿಯನ್ನು ಒತ್ತುವ ಸಮಯದಲ್ಲಿ ಮತದಾರರಿಗೆ ಕೈಗವಸುಗಳನ್ನು (ಗ್ಲೌಸ್) ಒದಗಿಸಲಾಗುತ್ತದೆ.
  • ಒಂದು ಮತದಾನ ಕೇಂದ್ರದಲ್ಲಿ ಗರಿಷ್ಠ 1,000 ಮತದಾರರು ಮತ ಚಲಾಯಿಸಬಹುದು. (ಈ ಮೊದಲು ಗರಿಷ್ಠ ಸಂಖ್ಯೆ 1500 ಆಗಿತ್ತು)
  • ಎಲ್ಲಾ ಮತದಾರರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ.
  • ಸೋಂಕು ತಡೆಗಟ್ಟುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ಖಾತರಿಪಡಿಸಿದ ಕೋವಿಡ್ ರೋಗಿಗಳಿಗೆ ಆರೋಗ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮತದಾನದ ಕೊನೆಯ ಅವಧಿಯಲ್ಲಿ ಮತ ಚಲಾಯಿಸಲು ಅವಕಾಶವಿರುತ್ತದೆ

ಮಾರ್ಗಸೂಚಿಗಳು ವರ್ಚುವಲ್ ರ್ಯಾಲಿಗಳು ಮತ್ತು ಡಿಜಿಟಲ್ ಅಭಿಯಾನಗಳ ಬಗ್ಗೆ ಏನನ್ನೂ ಉಲ್ಲೇಖಿಸುವುದಿಲ್ಲ. ಬಿಹಾರ ಶಾಸಕಾಂಗ ಸಭೆಯ ಅವಧಿ ನವೆಂಬರ್ 29 ರಂದು ಕೊನೆಗೊಳ್ಳುತ್ತದೆ ಮತ್ತು ಅಕ್ಟೋಬರ್-ನವೆಂಬರ್ನಲ್ಲಿ ಅವರು ಚುನಾವಣೆ ನಡೆಸುವ ಸಾಧ್ಯತೆಯಿದೆ. ಕೊರೋನವೈರಸ್ ಮತ್ತು ಮಳೆಯಿಂದಾಗಿ ಹಲವಾರು ಉಪಚುನಾವಣೆಗಳು ಇತ್ತೀಚೆಗೆ ಮುಂದೂಡಲ್ಪಟ್ಟವು. ಅವುಗಳ ಹೊಸ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ.

LEAVE A REPLY

Please enter your comment!
Please enter your name here