ಹಳೆಯಂಗಡಿ : ಕದಿಕೆ-ಸಸಿಹಿತ್ಲು ಸೇತುವೆಯ ಬಳಿ ಸಸಿ ನೆಡುವ ಕಾರ್ಯಕ್ರಮ

0
328
Tap to know MORE!

ಹಳೆಯಂಗಡಿ: ಸುರಿಯುತ್ತಿದ್ದ ಜಡಿ ಮಳೆಯ ನಡುವೆಯೂ, ಗ್ರಾಮದ ಕದಿಕೆ ಪರಿಸರದಲ್ಲಿ, ಸಸಿ ನೆಟ್ಟು, ಅದರ ನಿರಂತರ ರಕ್ಷಣೆ, ಪೋಷಣೆಗೆ ಬಿದಿರಿನ ಬೇಲಿ ನಿರ್ಮಾಣ ಕಾರ್ಯಕ್ರಮ ನಡೆಯಿತು. “ಸ್ವಚ್ಛ ಗ್ರಾಮ – ಸ್ವಚ್ಛ ಪರಿಸರ” ಎಂಬ ಶೀರ್ಷಿಕೆಯಡಿಯಲ್ಲಿ, ಪರಿಸರ ಸ್ನೇಹಿ ಸಸಿ ನೆಡುವ ಕಾರ್ಯಕ್ರಮವನ್ನು ಭಾನುವಾರ ಸಂಜೆ ಕದಿಕೆ – ಸಸಿಹಿತ್ಲು ಸೇತುವೆಯ ಬಳಿ ಆಯೋಜಿಸಲಾಯಿತು

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾರ್ಗದರ್ಶನ ನೀಡಿದರು. ಇವರೊಂದಿಗೆ, ಪಡುಪಣಂಬೂರು ವ್ಯವಸಾಯಿಕ ಸಹಕಾರಿ ಸಂಘ ನಿಯಮಿತ, ಹಳೆಯಂಗಡಿ ಇದರ ಉಪಾಧ್ಯಕ್ಷರಾದ ಶ್ರೀ ಶ್ಯಾಮ ಪ್ರಸಾದ್ ಇವರು ಉಪಸ್ಥಿತರಿದ್ದು, ಸಸಿ ನೆಡಲು ಸಹಕಾರ ನೀಡಿದರು.

ಧ್ಯೇಯ :-
ಗಿಡ ಮರ ನೆಟ್ಟು ಬೆಳೆಸಿ !
ಸುಂದರ ಪರಿಸರ ಉಳಿಸಿ!
ಶುದ್ಧ ಗಾಳಿಯನ್ನು ಸೇವಿಸಿ!
ಪರಿಸರ ಸಂರಕ್ಷಣೆ ಹೆಚ್ಚಿಸಿ !
ಮುಂದಿನ ಪೀಳಿಗೆಯನ್ನು ಉಳಿಸಿ..!

ಮಾರ್ಗದರ್ಶನ :-
● ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ಮಂಗಳೂರು
● ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು

ನೇತೃತ್ವ ಮತ್ತು ಆಶ್ರಯ :-
ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಹಳೆಯಂಗಡಿ
● ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ) ಹಳೆಯಂಗಡಿ

ಸಹಕಾರ :-
ಮಾತಾ ಅಮೃತಾನಂದಮಯಿ ಮಠ, ಅಮಲಾ ಭಾರತ ಅಭಿಯಾನ, ಬೋಳೂರು, ಮಂಗಳೂರು
● ಜಿಲ್ಲಾ ಪ್ರಶಸ್ತಿ ವಿಜೇತ, ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ

ಇದೇ ವೇಳೆ, ಉಪಹಾರವನ್ನು ನೀಡಿ ಸಹಕರಿಸಿದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಗಿಡಗಳನ್ನು ನೀಡಿ ಸಹಕರಿಸಿದ ಡಾ| ಗುರುಪ್ರಸಾದ್ ನಾವಡ ಹಳೆಯಂಗಡಿ, ಬಿದಿರಿನ ಬೇಲಿ ನಿರ್ಮಿಸಲು ಬಿದುರಿನ ವ್ಯವಸ್ಥೆಗೆ ಸಹಕರಿಸಿದ ಶ್ರೀ ಸ್ಟಾನಿ ಡಿಕೋಸ್ತಾ ಮತ್ತು ಗೊಲ್ಡಿನ್ ಡಿಕೋಸ್ತ ಹಳೆಯಂಗಡಿ, ರವರಿಗೆ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಸುಧಾಕರ್ ಆರ್ ಅಮೀನ್ ಮಂಡಲದ ಸರ್ವ ಸದಸ್ಯರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ಹಳೆಯಂಗಡಿ, ಸಿಸಿ

ಈ ಸಂದರ್ಭ ಯುವಕ ಮಂಡಲದ ಕಾರ್ಯಕಾರಿ ಮತ್ತು ಸಲಹಾ ಸಮಿತಿಯ ಸದಸ್ಯರುಗಳಾದ ಶ್ರೀ ಸುಧಾಕರ ಆರ್ ಅಮೀನ್, ಶ್ರೀ ಯತೀಶ್ ಕೋಟ್ಯಾನ್, ಶ್ರೀ ಲೋಕೇಶ್ ಚಿಲಿಂಬಿ, ಶ್ರೀ ಯೋಗೀಶ್ ಪಾವಂಜೆ, ಶ್ರೀ ಹಿಮಕರ ಕದಿಕೆ, ಶ್ರೀ ಮೋಹನ್ ಬಂಗೇರ, ಶ್ರೀ ವಿನೋದ್ ಕುಮಾರ್ ಕೊಳುವೈಲೂ, ಶ್ರೀ ತಾರಾನಾಥ ಕೊಳುವೈಲೂ, ಶ್ರೀ ಹರೀಶ್ ಗುಡ್ಡೆಮನೆ, ಶ್ರೀ ಧನಂಜಯ ಕದ್ರಿತೋಟ, ಶ್ರೀ ನಿಶಾಂತ್ ಕೊಪ್ಪಲ, ಶ್ರೀ ಯತೀಶ್ ಕೊಪ್ಪಲ,ಶ್ರೀ ರಾಮಚಂದ್ರ ಶೆಣೈ, ಶ್ರೀ ಪುಂಡಲೀಕ ಶೆಣೈ, ಶ್ರೀ ಇಂದುಧರ್ ,ಶ್ರೀ ಹೀತೇಶ್ ನಿತ್ಯಾನಂದ, ಶ್ರೀ ಮನೋಜ್ ಕೆಲೆಸಿಬೆಟ್ಟು,ಶ್ರೀ ಸುಕೇತ್ ಇಂದಿರಾನಗರ, ಶ್ರೀ ದಾಮೋದರ ಗೊಳಿದಡಿ, ಶ್ರೀ ರೋಹಿತ್ ಕೊಳುವೈಲು, ಶ್ರೀ ರಕ್ಷಿತ್ ಅಮೀನ್, ಯುವತಿ ಮತ್ತು ಮಹಿಳಾ ಮಂಡಲದ ಸದಸ್ಯರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಕುಮಾರಿ ರಕ್ಷಿತಾ, ಕುಮಾರಿ ವಿದ್ಯಾ ರಮೇಶ್ ಕೋಟ್ಯಾನ್ ಮತ್ತು ಶ್ರೀಮತಿ ಪ್ರಮೀಳಾ ಸಂಜೀವ ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here