IBPS 2021| 5,800+ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ | ಆನ್ಲೈನ್‌ನಲ್ಲೇ ಅರ್ಜಿ ಸಲ್ಲಿಸಿ

0
404
Tap to know MORE!

ಐಬಿಪಿಎಸ್ ಕ್ಲರ್ಕ್ 2021 (IBPS 2021) ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಯ ನೋಂದಣಿ ibps.in ನಲ್ಲಿ ಪ್ರಾರಂಭವಾಗಿದೆ. ಅರ್ಜಿ ನಮೂನೆಗಳನ್ನು ಸಲ್ಲಿಸಲು ಆಗಸ್ಟ್ 1 ಕೊನೆಯ ದಿನಾಂಕ. ಐಬಿಪಿಎಸ್ ಪ್ರಾಥಮಿಕ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕ್ಲರ್ಕ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಐಬಿಪಿಎಸ್ ಕ್ಲರ್ಕ್ 2021 ಪ್ರಿಲಿಮ್ಸ್ ಆಗಸ್ಟ್ 28, 29 ಮತ್ತು ಸೆಪ್ಟೆಂಬರ್ 4 ರಂದು ನಡೆಯಲಿದೆ. ಮುಖ್ಯ ಪರೀಕ್ಷೆ ಅಕ್ಟೋಬರ್ 31 ರಂದು ನಡೆಯಲಿದೆ.

ಐಬಿಪಿಎಸ್ ಕ್ಲರ್ಕ್ 2021 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕ್ಲೆರಿಕಲ್ ಕೇಡರ್ನಲ್ಲಿ ನೇಮಕಾತಿಯು ರಾಜ್ಯ / ಕೇಂದ್ರಾಡಳಿತ ಪ್ರದೇಶದ ಆಧಾರದ ಮೇಲೆ ನಡೆಯುವುದರಿಂದ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಐಬಿಪಿಎಸ್ ಕ್ಲರ್ಕ್ 2021 – ಅರ್ಹತಾ ಮಾನದಂಡ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವಯಸ್ಸಿನ ಮಿತಿ: 20-28 ವರ್ಷಗಳು. ಅಭ್ಯರ್ಥಿಯು ಜನಿಸಿದ್ದು 02.07.1993 ರ ನಂತರ ಮತ್ತು 01.07.2001 ಕ್ಕಿಂತ ಮುಂಚೆ ಜನಿಸಿರಬೇಕು ಎಂದು ಐಬಿಪಿಎಸ್ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದೆ.

ಶೈಕ್ಷಣಿಕ ಅರ್ಹತೆ: ಪದವೀಧರರು ಬ್ಯಾಂಕ್ ಕ್ಲರ್ಕ್ ಹುದ್ದೆಗೆ ಅರ್ಹರು. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಜ್ಞಾನ ಕಡ್ಡಾಯವಾಗಿದೆ.

LEAVE A REPLY

Please enter your comment!
Please enter your name here