ಜಮ್ಮು-ಕಾಶ್ಮೀರದಿಂದ 10 ಸಾವಿರ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಕೇಂದ್ರದ ಆದೇಶ

0
371
Tap to know MORE!

ಕಳೆದ ಆಗಸ್ಟ್‌‌‌‌ನಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿಗೆ ಹೆಚ್ಚುವರಿಯಾಗಿ ಸೇನಾಪಡೆಗಳನ್ನು ನಿಯೋಜನೆ ಮಾಡಲಾಗಿತ್ತು.

ಇದೀಗ ಸುಮಾರು 10,000 ಅರೆಸೈನಿಕ ಪಡೆಗಳ ಸಿಬ್ಬಂದಿಯನ್ನು ಜಮ್ಮು-ಕಾಶ್ಮೀರದಿಂದ ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರ ಬುಧವಾರ ಆದೇಶದಲ್ಲಿ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೀಮಾ ಬಲ, ಸಿಆರ್‌ಪಿಎಫ್‌‌‌‌‌, ಬಿಎಸ್‌‌ಎಫ್, ಅಸ್ಸಾಂ ರೈಫಲ್ಸ್‌‌ ಸೇರಿದಂತೆ ಸಿಐಎಸ್‌‌‌‌‌‌ಎಫ್‌‌‌‌ ಹಾಗೂ ವಿವಿಧ ಪ್ಯಾರಾಮಿಲಿಟರಿ ಪಡೆಗಳಿಗೆ ಸೇರಿರುವ ವಿವಿಧ ಬೆಟಾಲಿಯನ್‌‌‌‌ಗಳ ಪೈಕಿ ಕರ್ತವ್ಯ ನಿರ್ವಹಿಸುತ್ತಿದ್ದ 10,000 ಸಿಬ್ಬಂದಿಗಳು ಜಮ್ಮು-ಕಾಶ್ಮೀರದಿಂದ ತೆರಳಲಿದ್ದಾರೆ.

ತಕ್ಷಣದಿಂದ ಜಾರಿಗೆ ಬರುವಂತೆ 100 ಸಿಎಪಿಎಫ್‌‌‌‌‌‌‌ ತುಕಡಿಗಳನ್ನು ಹಿಂಪಡೆಯಲು ಹಾಗೂ ಆಯಾ ಸ್ಥಳಗಳಿಗೆ ಹಿಂತಿರುಗಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

LEAVE A REPLY

Please enter your comment!
Please enter your name here