ಇಂದು ಕಾಂಗ್ರೆಸ್ ನ ಪ್ರಮುಖ ಸಭೆಯಲ್ಲಿ ರಾಹುಲ್ ಗಾಂಧಿಯವರು ದೊಡ್ಡ ಮಟ್ಟದ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರ ರಾಜಿನಾಮೆಯನ್ನು ಕೋರಿ ಪತ್ರ ಬರೆದ ಮುಖಂಡರು “ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ” ಎಂದು ಟೀಕಿಸಿದ್ದಾರೆ. ಅವರನ್ನು “ಭಿನ್ನಮತೀಯರು” ಎಂದು ಅವರು ಆರೋಪಿಸಿದರು.
ಇದರ ಬೆನ್ನಲ್ಲೇ, ಸಹಿ ಮಾಡಿದವರ 30 ಮಂದಿಯಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಗುಲಾಮ್ ನಬಿ ಆಜಾದ್ ಅವರು “ರಾಹುಲ್ ಗಾಂಧಿ ಹೇಳಿದ್ದು ನಿಜವಾದರೆ, ರಾಜೀನಾಮೆ ನೀಡಲು ಸಿದ್ಧ” ಎಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಸಹ ರಾಹುಲ್ ಗಾಂಧಿ ಅವರ ಆರೋಪಕ್ಕೆ ಗುಳ್ಳೆ ಹೊಡೆದಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಕುರಿತು ಹಂಚಿರುವ ಕಪಿಲ್ ಸಿಬಲ್, “30 ವರ್ಷದಿಂದ ಕಾಂಗ್ರೆಸ್ ಪರವಾಗಿಯೇ ನಿಂತಿರುವ ನಮ್ಮನ್ನು, ಬಿಜೆಪಿ ಏಜೆಂಟ್ ಎನ್ನುತ್ತಿದ್ದಾರೆ” ಎಂದು ಖಡಕ್ ಪ್ರತ್ಯುತ್ತರ ನೀಡಿದ್ದಾರೆ.
Rahul Gandhi says “ we are colluding with BJP “
Succeeded in Rajasthan High Court defending the Congress Party
Defending party in Manipur to bring down BJP Govt.
Last 30 years have never made a statement in favour of BJP on any issue
Yet “ we are colluding with the BJP “!
— Kapil Sibal (@KapilSibal) August 24, 2020
“ನಾವು ಬಿಜೆಪಿಯೊಂದಿಗೆ ಒಡಂಬಡಿಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಕಾಂಗ್ರೆಸ್ ಪಕ್ಷವನ್ನು ರಕ್ಷಿಸಲು ರಾಜಸ್ಥಾನ ಹೈಕೋರ್ಟ್ನಲ್ಲಿ ಯಶಸ್ವಿಯಾಗಿದ್ದೇವೆ. ಬಿಜೆಪಿ ಸರ್ಕಾರವನ್ನು ಉರುಳಿಸಲು ಮಣಿಪುರದಲ್ಲಿ ಪಕ್ಷವನ್ನು ಕಟ್ಟುತ್ತಿದ್ದೇವೆ. ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯದ ಬಗ್ಗೆ ಬಿಜೆಪಿಯ ಪರವಾಗಿ ಹೇಳಿಕೆ ನೀಡಿಲ್ಲ. ಹೀಗಿರುವಾಗ, ನಾವು ಬಿಜೆಪಿಯೊಂದಿಗೆ ಒಪ್ಪಂದ ಮಾಡುತ್ತೇವೆ! “ಎಂದು ಅವರು ಟ್ವೀಟ್ ಮಾಡಿದ್ದಾರೆ