ಆಗಸ್ಟ್ 10ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಸುರೇಶ್ ಕುಮಾರ್

0
451
Tap to know MORE!

ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ರಾಜ್ಯದ 10ನೇ ತರಗತಿ ಪರೀಕ್ಷೆಯನ್ನು ಜೂನ್-ಜುಲೈ ತಿಂಗಳಿನಲ್ಲಿ ಯಶಸ್ವಿಯಾಗಿ ನಡೆಸಿ ಇದೀಗ ಮೌಲ್ಯಮಾಪನವೂ ಸಂಪೂರ್ಣಗೊಂಡಿದೆ.

SSLC ಪರೀಕ್ಷೆಗಳ ಫಲಿತಾಂಶವನ್ನು ಸೋಮವಾರ 10-8-2020 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು.

Posted by Suresh Kumar S on Friday, 7 August 2020

ರಾಜ್ಯದ ಶಿಕ್ಷಣ ಪರೀಕ್ಷಾ ಮಂಡಳಿಯು (ಕೆಎಸ್‌ಇಇಬಿ) ಸೋಮವಾರ ತನ್ನ ಅಧಿಕೃತ ಜಾಲತಾಣದಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಗೊಂಡಿದ್ದಾರೆ.

ಆಗಸ್ಟ್ 10 ರಂದು ಸಂಜೆ 3 ಗಂಟೆಗೆ ಎಸೆಸೆಲ್ಸಿ ಫಲಿತಾಂಶವು ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಶಿಕ್ಷಣ ಇಲಾಖೆಯ ಅಧಿಕೃತ ವೆಬ್​ಸೈಟ್​ಗಳಾದ kseeb.kar.nic.in ಅಥವಾ karresults.nic.in. ರಲ್ಲಿ ನೋಡಬಹುದಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here