ಕರ್ನಾಟಕ ರಾಜ್ಯ ಎಸೆಸೆಲ್ಸಿ ಫಲಿತಾಂಶ ಪ್ರಕಟ

0
385
Tap to know MORE!

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಪರೀಕ್ಷೆ ನಡೆಸಲು ಸಾಧ್ಯವೇ ಎಂಬ ಗೊಂದಲ ಇತ್ತು. ನೂರು ದಿನಗಳಲ್ಲಿ ಕಲಿಕೆಯು ಸಾಧ್ಯವಾಗಲಿಲ್ಲ ಆದರೆ ವಿದ್ಯಾರ್ಥಿಗಳ ಸ್ಪಂದನೆ ಉತ್ತಮವಾಗಿತ್ತು ಶೇ. 98 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು ಒಂದು ರೀತಿಯ ಕೊರೊನಾ ಸೇನಾನಿಗಳು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

8,11,050 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 34 ಕೇಂದ್ರಗಳಲ್ಲಿ 52,219 ಮೌಲ್ಯಮಾಪಕರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಸಕಾಲಕ್ಕೆ ತಿದ್ದಿ ಸಹಕರಿಸಿದ್ದಾರೆ. ಪರೀಕ್ಷೆಯ ಫಲಿತಾಂಶವನ್ನು http://karresults.nic.in ವೆಬ್ಸೈಟ್ ನಲ್ಲಿ ಪಡೆಯಬಹುದು. ವಿದ್ಯಾರ್ಥಿಗಳ ಮೊಬೈಲ್ ಗಳಿಗೂ ಫಲಿತಾಂಶ ರವಾನಿಸಲಾಗಿದೆ.

ಇದನ್ನೂ ಓದಿ : ರಾಜ್ಯದ ಟಾಪರ್ಸ್ ಮತ್ತು ಟಾಪ್ ಜಿಲ್ಲೆಗಳ ಪಟ್ಟಿ 

ಈ ಬಾರಿ 5.82ಲಕ್ಷ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ಬಾರಿ 72.79% ಫಲಿತಾಂಶ ದಾಖಲಾಗಿತ್ತು. ಈ ಬಾರಿ ಸರಕಾರಿ ಶಾಲೆಗಳಲ್ಲಿ 72.79%, ಅನುದಾನಿತ ಶಾಲೆಗಳಲ್ಲಿ 70.60% ಫಲಿತಾಂಶ ಬಂದಿದೆ. 2.28 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ 73.41% ಹಾಗೂ ನಗರ ಭಾಗದಲ್ಲಿ 77.18% ಫಲಿತಾಂಶ ದಾಖಲಾಗಿದೆ

66.41% ಬಾಲಕರು ಹಾಗೂ 77.74% ಬಾಲಕಿಯರು ತೇರ್ಗಡೆ ಹೊಂದಿದ್ದು ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ. 625ಕ್ಕೆ 625 ಅಂಕಗಳನ್ನು 6 ವಿದ್ಯಾರ್ಥಿಗಳು ಪಡೆದುಕೊಂಡಿರುವುದು ವಿಶೇಷವಾಗಿದೆ. 624 ಅಂಕಗಳನ್ನು 11 ವಿದ್ಯಾರ್ಥಿಗಳು ಗಳಿಸಿದ್ದಾರೆ.

LEAVE A REPLY

Please enter your comment!
Please enter your name here