ಇಂದು ಪ್ರಕಟವಾಗಲ್ಲ ಸಿಇಟಿ ಫಲಿತಾಂಶ – ದಿನಾಂಕ ಬದಲು!

0
399
Tap to know MORE!

ಇಂದು (ಆ.20) ಪ್ರಕಟವಾಗಬೇಕಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ತಾಂತ್ರಿಕ ಕಾರಣಗಳಿಂದಾಗಿ ಒಂದು ದಿನ ಮುಂದೂಡಲಾಗಿದೆ. ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ (ಆಗಸ್ಟ್ 21) ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ನಾಳೆ (ಆ.21) ಮಧ್ಯಾಹ್ನ 12.30ಕ್ಕೆ ಫಲಿತಾಂಶ ಪ್ರಕಟಿಸಲಿದೆ. ಅದೇ ಸಮಯದಿಂದ ವಿದ್ಯಾರ್ಥಿಗಳು ಅಧಿಕೃತ ಜಾಲತಾಣದಲ್ಲಿ ಫಲಿತಾಂಶವನ್ನು ನೋಡಬಹುದು ಎಂದು ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ಫಲಿತಾಂಶಗಳು ಹೊರಬಂದ ಕೂಡಲೇ, ಪರೀಕ್ಷಾ ಪ್ರಾಧಿಕಾರವು ಕಟ್ ಆಫ್ ಅಂಕಗಳನ್ನೂ ಸಹ ಬಿಡುಗಡೆ ಮಾಡಲಿದೆ. ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ವಿದ್ಯಾರ್ಥಿಯು ಪಡೆಯಬೇಕಾದ ಕನಿಷ್ಠ ಅಂಕಗಳು “ಕಟ್‌ಆಫ್” ಆಗಿದೆ. ಕಟ್-ಆಫ್‌ಗಳು ಪ್ರತಿವರ್ಷ ಬದಲಾಗುತ್ತವೆ. ಏಕೆಂದರೆ ಇದು ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ, ಅಭ್ಯರ್ಥಿಗಳ ಸಂಖ್ಯೆ, ಹಿಂದಿನ ವರ್ಷ ಕಟ್ ಆಫ್, ಕಷ್ಟದ ಮಟ್ಟ ಮತ್ತು ಸೀಟುಗಳ ಲಭ್ಯತೆ ಮುಂತಾದ ಅಂಶಗಳನ್ನು ಆಧರಿಸಿದೆ.

ಇದನ್ನೂ ಓದಿ : ಯಾವ ಜಾಲತಾಣದಲ್ಲಿ ಸಿಇಟಿ ಫಲಿತಾಂಶ ಬಿಡುಗಡೆ?

ಆಗಸ್ಟ್ 21 ಬೆಳಿಗ್ಗೆ 11ಕ್ಕೆ ಪತ್ರಿಕಾಗೋಷ್ಠಿ ಮೂಲಕ ಅಶ್ವತ್ಥನಾರಾಯಣ ಅವರು ಸಿಇಟಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here