ರಾಜ್ಯ ಸಿಇಟಿ ಫಲಿತಾಂಶ ಪ್ರಕಟ – ಟಾಪರ್ಸ್ ಪಟ್ಟಿ ಇಲ್ಲಿದೆ ನೋಡಿ

0
273
Tap to know MORE!

ಬೆಂಗಳೂರು: 2019-20ನೇ ಸಾಲಿನ ಕರ್ನಾಟಕ ರಾಜ್ಯ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಮಲ್ಲೇಶ್ವರಂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟಗೊಳಿಸಿದ್ದಾರೆ.

ಫಲಿತಾಂಶ ಪ್ರಕಟಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್‌ ನಾರಾಯಣ್ “ಕೊರೋನಾ ಸೋಂಕಿತ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ. ಒಟ್ಟು 63 ಸೋಂಕಿತ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು, ರೋಗದ ಲಕ್ಷಣಗಳು ಇದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರ ಮಾಡಲಾಗಿತ್ತು. ಪರೀಕ್ಷೆ ಯಶಸ್ವಿಯಾಗಿ ನಡೆಯಲು ಸಾರಿಗೆ, ಪೊಲೀಸ್ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೇರಿದಂತೆ ವೈದ್ಯರು ಸಹ ಕೆಲಸ ಮಾಡಿದ್ದಾರೆ” ಎಂದರು.

ಈ ಬಾರಿ 127 ಸ್ಥಳದಲ್ಲಿ ಪರೀಕ್ಷೆ ನಡೆದಿದೆ. 497 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಸಲಾಯ್ತು.

ಅಂಕಿ ಅಂಶಗಳು

ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳು 1,94,419

ಪರೀಕ್ಷೆಗೆ ಹಾಜರದ ವಿದ್ಯಾರ್ಥಿಗಳು 1,75,349

ಇಂಜಿನಿಯರಿಂಗ್ – 1,53,470
ಕೃಷಿ ಕೋರ್ಸ್ – 1,27,627
ಪಶುವೈದ್ಯಕೀಯ ಕೋರ್ಸ್ – 1,29,666
ಬಿಫಾರ್ಮ ಡಿಫಾರ್ಮಾ 1,55,552 ವಿದ್ಯಾರ್ಥಿಗಳಿಗೆ ರ್ಯಾಂಕ್ ಘೋಷಣೆ ಮಾಡಲಾಗಿದೆ.

ಟಾಪರ್ಸ್ ಲಿಸ್ಟ್

ಇಂಜಿನಿಯರಿಂಗ್ ಟಾಪ್ 3

1. ರಕ್ಷಿತ್ ಎಂ, ಆರ್ ವಿ ಕಾಲೇಜು, ಬೆಂಗಳೂರು
2. ಶುಭಾನ್ ಆರ್ – ಶ್ರೀ ಚೈತನ್ಯ ಇ ಟೆಕ್ನೋ ಶಾಲೆ, ಬೆಂಗಳೂರು
3. ಎಂ ಶಶಾಂಕ್ ಬಾಲಾಜಿ, ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

ಬಿ ಎಸ್ಸಿ ಅಗ್ರಿ ಟಾಪ್ 3

1. ವರುಣ್ ಗೌಡ ಎ ಬಿ, ಎಕ್ಸ್ ಪರ್ಟ್ ಕಾಲೇಜು, ಮಂಗಳೂರು
2. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು
3. ಲೋಕೇಶ್ ವಿ ಜೋಗಿ, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು

ಪಶುವೈದ್ಯಕೀಯ ಟಾಪ್ 3

1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು
2. ಆರ್ಯನ್ ಮಹಲಿಂಗಪ್ಪ ಚನ್ನಾಳ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಶಾಲೆ, ಕೋಟ
3. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು

ಬಿ ಫಾರ್ಮಾ, ಡಿ ಫಾರ್ಮಾ ಟಾಪ್ 3

1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು
2. ಸಂದೀಪನ್ ನಸ್ಕರ್, ಹೊರನಾಡ ಕನ್ನಡಿಗ
3. ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು, ಬೆಂಗಳೂರು

ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ಟಾಪ್ 3

1. ಅರ್ಣವ್ ಅಯ್ಯಪ್ಪ ಪಿ.ಪಿ – ಆಳ್ವಾಸ್ ಪಿಯು ಕಾಲೇಜ್, ಮೂಡುಬಿದ್ರೆ, ದಕ್ಷಿಣ ಕನ್ನಡ
2. ಸಂಜನಾ ಕೆ – ಬಿಎಎಸ್‍ಇ ಪಿಯು ಕಾಲೇಜ್, ಮೈಸೂರು
3. ಸಾಯಿ ವಿವೇಕ್ ಪಿ- ನಾರಾಯಣ ಇ-ಟೆಕ್ನೋ ಸ್ಕೂಲ್, ಬೆಂಗಳೂರು

ಇನ್ನುಳಿದಂತೆ ಇದೇ ಮೊದಲ ಭಾರಿಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ‌ಮೂಲಕ ಕೌನ್ಸಿಲಿಂಗ್ ನಡೆಯಲಿದ್ದು, ದಾಖಲಾತಿ ದೃಢೀಕರಣ ಹಾಗೂ ಕೌನ್ಸಿಲಿಂಗ್ ದಿನಾಂಕ ಸದ್ಯದಲ್ಲೇ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here