ಶ್ರೀ ರಾಮನ ಆಶೀರ್ವಾದದಿಂದ ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗುತ್ತದೆ : ಕೇಜ್ರಿವಾಲ್

0
190
Tap to know MORE!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಅಯೋಧ್ಯೆಯಲ್ಲಿ ನಡೆಯುತ್ತಿರುವ ಭವ್ಯ ರಾಮ್ ಮಂದಿರದ ‘ಭೂಮಿ ಪೂಜೆ’ ಸಮಾರಂಭವನ್ನು ಕೊಂಡಾಡಿ, ದೇಶವಾಸಿಗಳನ್ನು ಶ್ಲಾಘಿಸಿದ್ದಾರೆ. ಭಗವಾನ್ ರಾಮನ ಆಶೀರ್ವಾದದಿಂದ ಭಾರತದಲ್ಲಿ ಹಸಿವು, ಅನಕ್ಷರತೆ ಮತ್ತು ಬಡತನವು ಕೊನೆಗೊಳ್ಳಲಿದೆ. ಇದರಿಂದ ಭಾರತವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂದು ಕೇಜ್ರಿವಾಲ್ ಹೇಳಿದರು.

“ಭೂಮಿ ಪೂಜೆಯ ಸಂದರ್ಭದಲ್ಲಿ ಇಡೀ ದೇಶಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಭಗವಾನ್ ರಾಮನ ಆಶೀರ್ವಾದ ನಮ್ಮೊಂದಿಗೆ ಇರಲಿ. ಅವರ ಆಶೀರ್ವಾದದಿಂದ ನಮ್ಮ ದೇಶವು ಹಸಿವು, ಅನಕ್ಷರತೆ ಮತ್ತು ಬಡತನವನ್ನು ತೊಡೆದುಹಾಕುತ್ತದೆ ಮತ್ತು ಭಾರತವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುತ್ತದೆ. ಮುಂದಿನ ದಿನಗಳಲ್ಲಿ ಭಾರತವು ಜಗತ್ತಿಗೆ ನಿರ್ದೇಶನ ನೀಡುತ್ತದೆ. ಜೈ ಶ್ರೀ ರಾಮ್, ಜೈ ಭಜರಂಗ್ ಬಲಿ “ಎಂದು ಕೇಜ್ರಿವಾಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here