ಕೇರಳ: ಕೋಝಿಕೋಡ್ ನಲ್ಲಿ ವಿಮಾನ ದುರಂತ

1
302
Tap to know MORE!

ಕೇರಳದ ಕೋಝಿಕೋಡ್‌ನ ಕರಿಪುರ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಇಂದು ಸಂಜೆ 7.45 ಕ್ಕೆ ವಿಮಾನವು ಪತನಗೊಂಡಿದೆ.

ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಅನಿವಾಸಿ ಭಾರತೀಯರನ್ನು ಹೊತ್ತು ಬರುತ್ತಿದ್ದ ವಿಮಾನ, ಲ್ಯಾಂಡಿಂಗ್ ವೇಳೆ ಕ್ರಾಶ್ ಆಗಿದೆ ಎಂದು ವರದಿಯಾಗಿದೆ. 10 ಹಸುಗೂಸುಗಳು ಸೇರಿದಂತೆ 191 ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಬರುತ್ತಿತ್ತು.

ಕೇರಳ ಪೊಲೀಸ್ ಅಧಿಕಾರಿಗಳ ಪ್ರಕಾರ, 18 ಮಂದಿ ಬಲಿಯಾಗಿದ್ದು, 123 ಮಂದಿ ಗಾಯಗೊಂಡಿದ್ದಾರೆ. 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದಿದ್ದಾರೆ.

ಭಾರತದ ಉನ್ನತ ವಾಯುಯಾನ ಸಂಸ್ಥೆ, ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಈ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದ್ದಾರೆ.

ಪೈಲಟ್, ಕೋ-ಪೈಲಟ್ ಸೇರಿದಂತೆ ಹದಿನೆಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆ ಪ್ರದೇಶದಲ್ಲಿ ಭಾರಿ ಮಳೆಯ ಮಧ್ಯೆ ಈ ಘಟನೆ ನಡೆದಿದೆ.

Pained by the plane accident in Kozhikode. My thoughts are with those who lost their loved ones. May the injured recover…

Posted by Narendra Modi on Friday, 7 August 2020

ದುರಂತಕ್ಕೆ ಕಾರಣ?

ದುಬೈನಿಂದ ಹೊರಟ ವಿಮಾನದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು ಎನ್ನಲಾಗಿದೆ. ಹಾಗೇನಾದರೂ ತೊಂದರೆ ಕಾಣಿಸಿಕೊಂಡರೆ ವಿಮಾನವನ್ನು ಬದಲಿಸಲಾಗುತ್ತದೆ. ಪ್ರಯಾಣದ ನಡುವಲ್ಲಾದರೆ, ಶೀಘ್ರದಲ್ಲೇ ವಿಮಾನ ನಿಲ್ದಾಣದ ಕಛೇರಿಗೆ ವಿಷಯವನ್ನು ರವಾನಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಆದರೆ ಈ ವಿಮಾನದಲ್ಲಿ ಪ್ರಯಾಣ ಸುಖಕರವಾಗಿದ್ದರೂ , ಲ್ಯಾಂಡಿಂಗ್ ಗೇರ್ ವರ್ಕ್ ಆಗದ ಕಾರಣ ಪೈಲಟ್ ಗೆ ವಿಮಾನವನ್ನು ಇಳಿಸಲಾಗಿಲ್ಲ.

ನಿಲ್ದಾಣದ ಸುತ್ತ  ಸುಮಾರು 3 ಸುತ್ತು ತಿರುಗಿಸಿ, ತೈಲವನ್ನು ಖಾಲಿ ಮಾಡಲು ಪೈಲಟ್ ನಿರ್ಧರಿಸಿದರು. ಅದು ಯಶಸ್ವಿಯಾದಾಗ ತನ್ನಷ್ಟಕ್ಕೇ ವಿಮಾನ ಕೆಳಗೆ ಬಂತು. ಆದರೆ ಕೊನೆಗೆ ಕಂಟ್ರೋಲ್ ತಪ್ಪಿ, ಸುಮಾರು 35 ಅಡಿ ಕೆಳಗೆ ಬಿದ್ದ ಪರಿಣಾಮ, ಪೈಲಟ್ ಸೇರಿ ಸುಮಾರು 20 ಮಂದಿ ಸಾವನ್ನಪ್ಪಿದ್ದು, ಉಳಿದವರನ್ನು ಈಗಾಗಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

1 COMMENT

LEAVE A REPLY

Please enter your comment!
Please enter your name here