ಕೋಝಿಕೋಡ್ ವಿಮಾನ ದುರಂತ – ಓರ್ವನಿಗೆ ಕೊರೋನಾ – ಸೇರಿದ ಎಲ್ಲರೂ ಕ್ವಾರಂಟೈನ್!

0
108
Tap to know MORE!

ಕೇರಳದ ಕೋಝಿಕೋಡ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಒಬ್ಬ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು,  ಆ ಊರಿನ ಜನತೆಗೆ, ಸಹಾಯಕ್ಕೆ ಧಾವಿಸಿದ ಸ್ವಯಂಸೇವಕರಿಗೆ ಸೋಂಕಿನ ಭೀತಿ ಹೆಚ್ಚಿಸಿದೆ.

ಆಸ್ಟರ್ ಮಿಮ್ಸ್ ಆಸ್ಪತ್ರೆ ವೈದ್ಯಕೀಯ ಬುಲೆಟಿನ್ ಹೊರಡಿಸಿ, ಈ ಸುದ್ದಿಯನ್ನು ದೃಢಪಡಿಸಿದೆ ಮತ್ತು ಕಟ್ಟುನಿಟ್ಟಾದ ಕ್ವಾರಂಟೈನ್ ಪ್ರೋಟೋಕಾಲ್‌ಗಳ ಪ್ರಕಾರ ಎಲ್ಲಾ ರೋಗಿಗಳನ್ನು ನೋಡಿಕೊಳ್ಳಲಾಗುತ್ತಿದಗ ಎಂದು ಹೇಳಿದರು.

ಇತರ ವ್ಯಕ್ತಿಗಳ ಕೋವಿಡ್ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಕೆ ಟಿ ಜಲೀಲ್ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದರು.

ಕೋಝಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ಕೋಝಿಕೋಡ್: ಕರಿಪುರ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ – 18 ಮಂದಿ ಸಾವು!

ಆರೋಗ್ಯ ಸಚಿವ ಕೆ.ಕೆ.ಶೈಲಜಾ ಮಾತನಾಡಿ, ಶಿಕ್ಷಕರು, ಸ್ಥಳೀಯರು, ವಿಮಾನ ನಿಲ್ದಾಣದ ಸಿಬ್ಬಂದಿ, ಸ್ವಯಂಸೇವಕರು, ಆರೋಗ್ಯ ಕಾರ್ಯಕರ್ತರು, ಪೊಲೀಸ್, ಅಗ್ನಿಶಾಮಕ ದಳ, ಭದ್ರತಾ ಸಿಬ್ಬಂದಿ, ಆಂಬ್ಯುಲೆನ್ಸ್ ಕಾರ್ಮಿಕರು, ಚಾಲಕರು, ಅಧಿಕಾರಿಗಳು ಮತ್ತು ಮಾಧ್ಯಮಗಳಿಗೆ ಕ್ವಾರಂಟೈನ್ ಗೆ ಒಳಪಡಲು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here