“ಲಾಕ್‌ಡೌನ್ ನನ್ನ ಓದಿಗೆ ಬಹಳ ಸಹಕಾರಿಯಾಯಿತು” : ಸಿಇಟಿ ಟಾಪರ್

0
175
Tap to know MORE!

ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಫಲಿತಾಂಶಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಪ್ರಕಟಿಸಿದಾಗ ಟಾಪರ್ ರಕ್ಷಿತ್ ಎಂ ಅಚ್ಚರಿಗೊಂಡಿದ್ದರಂತೆ!

“ನಾನು ಶ್ರೇಣಿಯನ್ನು ನಿರೀಕ್ಷಿಸಿದ್ದರೂ, ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಅಗ್ರಸ್ಥಾನ ಪಡೆಯುತ್ತೇನೆಂದು ಅಂದುಕೊಂಡಿರಲಿಲ್ಲ. ಈ ಫಲಿತಾಂಶ ಪಡೆಯಲು ಕೊರೋನಾ ಭೀತಿಯಿಂದ ಜಾರಿಯಲ್ಲಿದ್ದ ಲಾಕ್‌ಡೌನ್ ಬಹಳಷ್ಟು ಉಪಯೋಗವಾಯಿತು ಎಂದು ರಕ್ಷಿತ್ ಹೇಳಿದರು.

ನಾನು ಸಂಗೀತವನ್ನು ಇಷ್ಟಪಡುತ್ತೇನೆ ಮತ್ತು ಬಿಡುವಿನ ವೇಳೆಯಲ್ಲಿ ಕರ್ನಾಟಕ ಸಂಗೀತವನ್ನು ಕೇಳುತ್ತಿರುತ್ತೇನೆ” ಎಂದು ಅವರುಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದರು.

ಸಿಇಟಿ ಕುರಿತು ಮಾತನಾಡಿದ ವಿದ್ಯಾರ್ಥಿ ರಕ್ಷಿತ್, “ನನ್ನ ಮುಖ್ಯ ಗಮನ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಎಂಬ ಮೂರು ವಿಷಯಗಳ ಮೇಲೆ ಇತ್ತು. ಲಾಕ್‌ಡೌನ್ ನನಗೆ ಹೆಚ್ಚು ಸಮಯ ಮತ್ತು ಗೊಂದಲವಿಲ್ಲದೆ ಅಧ್ಯಯನ ಮಾಡಲು ಸಹಾಯ ಮಾಡಿತು. ಕೋವಿಡ್ ಎಲ್ಲರಿಗೂ ಕಠಿಣ ಸಮಯವನ್ನು ನೀಡುತ್ತಿದ್ದರೂ, ಅದು ವಿದ್ಯಾರ್ಥಿಗಳಿಗೆ ನಿಜವಾಗಿಯೂ ಸಹಾಯ ಮಾಡಿತು. ನಾನು ದಿನಕ್ಕೆ ಐದು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ ಮತ್ತು ಪ್ರತಿದಿನ ಅನೇಕ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುತ್ತಿದ್ದೆ” ಎಂದರು.

LEAVE A REPLY

Please enter your comment!
Please enter your name here