ನರೇಂದ್ರ ಮೋದಿ ಈಗ ನಾಲ್ಕನೇ ಅತೀ ಹೆಚ್ಚು ಕಾಲ ಸೇವೆ ಸಲ್ಲಿಸಿದ ಭಾರತದ ಪ್ರಧಾನಿ

0
88

ನರೇಂದ್ರ ಮೋದಿ ಅವರು ಅತೀ ಹೆಚ್ಚು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸೇತರ ಪ್ರಧಾನ ಮಂತ್ರಿಯಾದ ಸಾಧನೆ ಮಾಡಿದರು ಮತ್ತು ಒಬ್ಬ ಭಾರತದ ಪ್ರಧಾನಿಯಾಗಿ, ನಾಲ್ಕನೇ ಅತಿ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂದು ಭಾರತೀಯ ಪಕ್ಷವು ಇಂದು ತಿಳಿಸಿದೆ.

“ಇಂದು, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಪ್ರಧಾನಮಂತ್ರಿಯಾಗಿದ್ದಾರೆ! ದೀರ್ಘಾವಧಿ ಅಧಿಕಾರದಲ್ಲಿದ್ದ, ಕಾಂಗ್ರೆಸೇತರ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ವಾಜಪೇಯಿ ಜಿ ಅವರ ಎಲ್ಲಾ ಅವಧಿಗಳನ್ನು ಒಟ್ಟುಗೂಡಿಸಿದರೆ, 2,268 ದಿನಗಳ ಕಾಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಪ್ರಧಾನಿ ಮೋದಿಯವರು ಆ ಅವಧಿಯನ್ನು ದಾಟಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಲ್ವಿಯಾ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಮೊದಲ ಮೂರನೇ ಸ್ಥಾನದಲ್ಲಿರುತ್ತಾರೆ.

ನರೇಂದ್ರ ಮೋದಿ ಅವರು 2014 ರ ಮೇ 26 ರಂದು ದೇಶದ 14 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2019 ರ ಮೇ 30 ರಂದು ಪ್ರಧಾನ ಮಂತ್ರಿಯಾಗಿ ತಮ್ಮ ಎರಡನೇ ಅವಧಿಗೂ ಆಯ್ಕೆಯಾದರು.

ಜವಾಹರಲಾಲ್ ನೆಹರು ಇದುವರೆಗೆ ಅತಿ ಹೆಚ್ಚು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಧಿಕಾರಾವಧಿಯು ಸುಮಾರು 17 ವರ್ಷಗಳ ಕಾಲ ನಡೆಯಿತು. ನಂತರ ಅವರ ಮಗಳು ಇಂದಿರಾ ಗಾಂಧಿ ಕ್ರಮವಾಗಿ 11 ವರ್ಷಗಳು ಮತ್ತು ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಡಾ.ಮನ್ಮೋಹನ್ ಸಿಂಗ್ ಅವರು ತಲಾ ಐದು ವರ್ಷಗಳ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದರು.

ಇತರ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಗಳು

  • ಮೊರಾರ್ಜಿ ದೇಸಾಯಿ (ಮಾರ್ಚ್ 24, 1977 – ಜುಲೈ 28, 1979)
  • ಚರಣ್ ಸಿಂಗ್ (ಜುಲೈ 28, 1979 – ಜನವರಿ 14, 1980)
  • ವಿಶ್ವನಾಥ್ ಪ್ರತಾಪ್ ಸಿಂಗ್ (ಡಿಸೆಂಬರ್ 2 , 1989 – ನವೆಂಬರ್ 10, 1990)
  • ಚಂದ್ರ ಶೇಖರ್ (ನವೆಂಬರ್ 10, 1990 – ಜೂನ್ 21, 1991)
  • ಎಚ್.ಡಿ. ದೇವೇಗೌಡ (ಜೂನ್ 1, 1996 – ಏಪ್ರಿಲ್ 21, 1997)
  • ಇಂದರ್ ಕುಮಾರ್ ಗುಜ್ರಾಲ್ (ಏಪ್ರಿಲ್ 21, 1997 – ಮಾರ್ಚ್ 19, 1998).

LEAVE A REPLY

Please enter your comment!
Please enter your name here