ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಸಲ್ಲಿಸಿದ ಎಂ.ಎಸ್.ಧೋನಿ

1
136

ಧೋನಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಇಂನ್ಸ್ಟಾಗ್ರಾಂ ನಲ್ಲಿ ವಿದಾಯದ ವೀಡಿಯೋವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಆದರೂ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್( 2020 ರಲ್ಲಿ ಆಡಲಿದ್ದಾರೆ. 2019 ರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ.

ಇದನ್ನೂ ಓದಿ : ಅಕ್ಟೋಬರ್- ನವೆಂಬರ್‌ನಲ್ಲಿ ಐಪಿಎಲ್ 2020

 

View this post on Instagram

 

Shared post on

ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ, ಭಾರತವು ಎರಡನೇ ವಿಶ್ವಕಪ್ ಗೆದ್ದಿತ್ತು. 2011 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ, ನಾಯಕ ಧೋನಿ ಮತ್ತು ಗಂಭೀರ್ ರವರ ಸಾಹಸಮಯ ಆಟದ ಪರಿಣಾಮ ಮತ್ತು ಇಡೀ ಪಂದ್ಯಾವಳಿಯಲ್ಲಿ ಯುವರಾಜ್ ಸಿಂಗ್ ತೋರಿದ ಆಲ್‌ರೌಂಡ್ ಆಟದ ಪರಿಣಾಮ, ಭಾರತವು 28 ವರ್ಷಗಳ ಬಳಿಕ, ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು.

ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆಯು ಒಂದು ದಂತಕಥೆಯಾಗಿದೆ. ಇವರ ಜೀವನದ ಕುರಿತು ಬಾಲಿವುಡ್‌ನಲ್ಲಿ ಸಿನೆಮಾ ಬಂದಿದ್ದು, ಸುಶಾಂತ್ ಸಿಂಗ್ ರಜಪೂತ್ ಧೋನಿ ಪಾತ್ರದಲ್ಲಿ ನಟಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here