ಮಂಡ್ಯ : ಕೊರೋನಾ ಸೋಂಕಿನಿಂದ ಗುಣಮುಖರಾದ 85 ವರ್ಷದ ಕಾಮೇಗೌಡ್ರು

0
162
Tap to know MORE!

ಮಂಡ್ಯ: ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದ ಮಂಡ್ಯ ಮೂಲದ ರೈತ ಕಾಮೆಗೌಡ ಚೇತರಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆಗಾಗಿ ತನ್ನ ಹಳ್ಳಿಯ ಸುತ್ತ ಸುಮಾರು 16 ಕೊಳಗಳನ್ನು ಅಗೆದಿದ್ದ ಕಾಮೇಗೌಡರನ್ನು, ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 14 ದಿನಗಳ ಚಿಕಿತ್ಸೆಯ ನಂತರ ಕೋವಿಡ್‌ನಿಂದ ಚೇತರಿಸಿಕೊಂಡಿರುತ್ತಾರೆ ಎಂದು ವರದಿಯಾಗಿದೆ.

“85 ರ ಹರೆಯದ ಕಾಮೆಗೌಡ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲಾಡಳಿತವು ಒಂದು ಸಂಗೀತ ತಂಡದೊಂದಿಗೆ ಅವರಿಗೆ “ರಾಯಲ್ ವಿದಾಯವನ್ನು ನೀಡಿತು” ಎಂದು ಅವರ ಸಹವರ್ತಿ, ಹತ್ತಿರದ ಮಲವಳ್ಳಿ ಪಟ್ಟಣದ ಶಿವಪ್ಪ ಅವರು ಐಎಎನ್‌ಎಸ್‌ಗೆ ಫೋನ್‌ನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here