ಮಂಗಳೂರು ವಿವಿ – ಸೆಪ್ಟೆಂಬರ್ 15 ರಿಂದ 30 ರವರೆಗೆ ಪರೀಕ್ಷೆ : ಉಪಕುಲಪತಿ

1
453
Tap to know MORE!

ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 30 ರವರೆಗೆ 2019-20 ಶೈಕ್ಷಣಿಕ ವರ್ಷದ ಅಂತಿಮ ಸೆಮಿಸ್ಟರ್ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ನಡೆಸಲಿದೆ. ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅವರಿಗೆ 2021 ರ ಜನವರಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಹೇಳಿದರು.

ಬ್ಯಾಕ್‌ಲಾಗ್ ವಿಷಯಗಳಿಗೂ ಪರೀಕ್ಷೆ
ಮಂಗಳವಾರ ಇಲ್ಲಿ ನಡೆದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು, ಇತರ ಸೆಮಿಸ್ಟರ್‌ಗಳ ಪೂರಕ ಪರೀಕ್ಷೆಯನ್ನು ಸಹ ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 30 ರವರೆಗೆ ಮತ್ತು ಮುಂದಿನ ಜನವರಿಯಲ್ಲಿ ನಡೆಸಲಾಗುವುದು ಎಂದು ಹೇಳಿದರು. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇದು ಅನುವು ಮಾಡಿಕೊಡುತ್ತದೆ.

ಕಂಟೈನ್‌ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ
ಕಂಟೈನ್‌ಮೆಂಟ್ ವಲಯಗಳ ವಿದ್ಯಾರ್ಥಿಗಳಿಗೆ ಮತ್ತು ಕೋವಿಡ್-19 ಗೆ ಸೋಂಕಿತ ವಿದ್ಯಾರ್ಥಿಗಳಿಗೆ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಮತ್ತು ವಿಶೇಷ ಕೊಠಡಿಗಳನ್ನೂ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಸೆಮಿಸ್ಟರ್ ಪರೀಕ್ಷೆ ನಡೆಯಬೇಕಾ / ನಡೆಯಬಾರದಾ? – ಆ.10 ರಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ

ಇತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ…
II ಮತ್ತು IV ಸೆಮಿಸ್ಟರ್‌ನ ಪದವಿ ವಿದ್ಯಾರ್ಥಿಗಳಿಗೆ ಮತ್ತು II ಸೆಮಿಸ್ಟರ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ, ಅವರ ಪರೀಕ್ಷೆಯನ್ನು ಏಪ್ರಿಲ್-ಮೇ 2020 ರಲ್ಲಿ ನಡೆಸಬೇಕಾಗಿತ್ತು. ಆದರೆ ಈಗ “ಫಾರ್ಮುಲಾ ಆಧಾರಿತ ಅಂಕ” ಗಳ ಮೇಲೆ ಬಡ್ತಿ ನೀಡಲಾಗುವುದು ಎಂದರು.

ಡಿಜಿಟಲ್ ಮೌಲ್ಯಮಾಪನ
ಅಂತಿಮ ಸೆಮಿಸ್ಟರ್ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ಮಾಡಲು ವಿಶ್ವವಿದ್ಯಾಲಯವು ತಯಾರಿ ನಡೆಸುತ್ತದೆ ಎಂದು ಯಡಪಡಿತ್ತಾಯ ಹೇಳಿದರು. ಹೀಗಾಗಿ, ಶಿಕ್ಷಕರು ಮಂಗಳೂರಿನ ಕೇಂದ್ರೀಕೃತ ಮೌಲ್ಯಮಾಪನ ಕೇಂದ್ರಕ್ಕೆ ಬರಬೇಕಾಗಿಲ್ಲ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗುಗಳಲ್ಲಿ ಮೂರು ಡಿಜಿಟಲ್ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

2020-21 ಶೈಕ್ಷಣಿಕ ವರ್ಷ ಮತ್ತು ತರಗತಿಗಳು..
2020-21ರ ಶೈಕ್ಷಣಿಕ ವರ್ಷವು ಸೆಪ್ಟೆಂಬರ್‌ನಲ್ಲಿ ಆನ್‌ಲೈನ್ ತರಗತಿಗಳೊಂದಿಗೆ ಪ್ರಾರಂಭವಾಗಲಿದೆ ಎಂದು ಹೇಳಿದರು. ಒಂದು ವೇಳೆ, ಕೋವಿಡ್-19 ನಿಯಂತ್ರಣಕ್ಕೆ ಬಂದರೆ, ಅಕ್ಟೋಬರ್‌ನಲ್ಲಿ ತರಗತಿ ಬೋಧನೆ ಪ್ರಾರಂಭವಾಗುತ್ತದೆ. ಇಲ್ಲದಿದ್ದರೆ, ಪರಿಸ್ಥಿತಿ ಸರಿಯಾಗುವವರೆಗೆ ಆನ್-ಲೈನ್ ತರಗತಿಗಳನ್ನೇ ನಡೆಸಲಾಗುತ್ತದೆ” ಎಂದು ಅವರು ಹೇಳಿದರು.

ಎಂಸಿಎ ಎರಡು ವರ್ಷಕ್ಕೆ ಇಳಿಕೆ
ಮಹತ್ವದ ನಿರ್ಧಾರವೊಂದರಲ್ಲಿ, ಮಂಡಳಿಯು ತನ್ನ ಎರಡು ವರ್ಷದ ಸ್ನಾತಕೋತ್ತರ ಕೋರ್ಸ್‌ಗಳೊಂದಿಗೆ ಸಮಾನತೆಯನ್ನು ತರಲು ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ (ಎಂಸಿಎ) ಸ್ನಾತಕೋತ್ತರ ಕೋರ್ಸ್ ಅವಧಿಯನ್ನು ಮೂರರಿಂದ ಎರಡು ವರ್ಷಕ್ಕೆ ಇಳಿಸಲು ಒಪ್ಪಿಕೊಂಡಿತು.

ರಿಜಿಸ್ಟ್ರಾರ್ (ಆಡಳಿತ) ಕೆ.ರಾಜು ಮೊಗವೀರ, ರಿಜಿಸ್ಟ್ರಾರ್ (ಮೌಲ್ಯಮಾಪನ) ಪಿ.ಎಲ್. ಧರ್ಮ ಮತ್ತು ಹಣಕಾಸು ಅಧಿಕಾರಿ (ಉಸ್ತುವಾರಿ) ಬಿ.ನಾರಾಯಣ ಮಾತನಾಡಿದರು

1 COMMENT

LEAVE A REPLY

Please enter your comment!
Please enter your name here