ಮಂಜೇಶ್ವರದ ಮೂವರು ಸಹೋದರಿಯರು, ಆಗಸ್ಟ್ 16 ರಿಂದ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದಾರೆ. ಮೂವರು ಸಹ ಮಿಯಾಪದವು ನಿವಾಸಿಗಳಾಗಿದ್ದು, 16, 17 ಮತ್ತು 21 ವರ್ಷ ವಯಸ್ಸಿನ ಹುಡುಗಿಯರಾಗಿದ್ದಾರೆ.
ಆಗಸ್ಟ್ 16 ರಂದು ಬೆಳಿಗ್ಗೆ ಅವರು ಆಸ್ಪತ್ರೆಗೆ ಹೋಗಿದ್ದರು. ಆದರೆ ಅಲ್ಲಿಂದ ಅವರು ಹಿಂತಿರುಗಲಿಲ್ಲ ಎಂದು ಹೇಳಲಾಗುತ್ತಿದೆ.
ಇದುವರೆಗೆ ದೊರೆತಿರುವ ಮಾಹಿತಿ ಪ್ರಕಾರ, ಮೂವರು ಸಹೋದರಿಯರ ಪೈಕಿ ಒಬ್ಬರ ಬಳಿ ಮೊಬೈಲ್ ಫೋನ್ ಇದೆ. ಆದರೆ ಪೋಷಕರು ಕರೆ ಮಾಡಿದರೂ, ಅವರು ಉತ್ತರಿಸುತ್ತಿಲ್ಲ.
ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಸಹೋದರಿಯರನ್ನು ಪತ್ತೆ ಹಚ್ಚಲು ಸೈಬರ್ ಸೆಲ್ ಸಹಾಯದಿಂದ ತನಿಖೆ ನಡೆಸಲಾಗುತ್ತಿದೆ.