ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ

0
222
Tap to know MORE!

ಬುಧವಾರವಷ್ಟೆ ರಾಜೀನಾಮೆ ಸಲ್ಲಿಸಿದ ಗಿರೀಶ್ ಚಂದ್ರ ಮುರ್ಮು ಅವರ ಬದಲಿಗೆ, ಜಮ್ಮು ಮತ್ತು ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರನ್ನು ನೇಮಕ ಮಾಡಲು ಕೇಂದ್ರ ಸರ್ಕಾರವು ಇಂದು ಅನುಮೋದನೆ ನೀಡಿದೆ.

ಕೇಂದ್ರಾಡಳಿತ ಪ್ರದೇಶದ ಹಾಲಿ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ, ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರು ಸಿನ್ಹಾ ಅವರನ್ನು ಈ ಹುದ್ದೆಗೆ ನೇಮಕ ಮಾಡಿದರು.

ಸಿನ್ಹಾ ಅವರ ನೇಮಕಾತಿಯು ಅವರು ತಮ್ಮ ಕಚೇರಿಯ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರಲಿದೆ ಎಂದು ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಗ್ ಪ್ರಕಟಿಸಿದ್ದಾರೆ.

ಐಎಎಸ್ ಅಧಿಕಾರಿ ಸಿನ್ಹಾ, ಈ ಹಿಂದೆ ಕೇಂದ್ರ ಹಣಕಾಸು ಮತ್ತು ಗೃಹ ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅದಲ್ಲದೆ, ಅವರು ರೈಲ್ವೆ ರಾಜ್ಯ ಸಚಿವರಾಗಿದ್ದರು.

ಗಿರೀಶ್‌ಚಂದ್ರ ಮುರ್ಮು ಅವರನ್ನು ಕಳೆದ ವರ್ಷ ಕೇಂದ್ರ ಪ್ರದೇಶವನ್ನಾಗಿ ಮಾಡಿದ ನಂತರ 2019 ರ ಅಕ್ಟೋಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡರು.

LEAVE A REPLY

Please enter your comment!
Please enter your name here