ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ವಂಚನೆ -13 ಮಂದಿಯ ಬಂಧನ

1
151
Tap to know MORE!

ಮಥುರಾ:ಜನರಿಂದ ಹಣ ವಸೂಲಿ ಮಾಡಿ ವಂಚಿಸಿರುವ ಆರೋಪದಲ್ಲಿ ಭಾಗವತ್ತಾಚಾರ್ಯ ಸೇರಿದಂತೆ 13 ಮಂದಿಯನ್ನು ಮಥುರಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಗೋವಿಂದ್ ನಗರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ ಐಆರ್ ಪ್ರಕಾರ, ಭಾಗವತ್ತಾಚಾರ್ಯ ಸೇರಿದಂತೆ 13 ಮಂದಿ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಹೆಸರಿನ್ನು ನಕಲಿಯಾಗಿ ರಚಿಸಿಕೊಂಡು ಜನರಿಗೆ ವಂಚಿಸಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಪೊಲೀಸರಿಗೆ ದೂರು ನೀಡಿತ್ತು.

ಟ್ರಸ್ಟ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರಿಂದ ಹಣ ಸಂಗ್ರಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಜನರು ಈ ಬಗ್ಗೆ ನಮ್ಮನ್ನು ವಿಚಾರಿಸಿದಾಗ ಈ ನಕಲಿ ಟ್ರಸ್ಟ್ ವಿಚಾರ ಬಹಿರಂಗವಾಗಿರುವುದಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಕಾರ್ಯದರ್ಶಿ ಕಪಿಲ್ ಶರ್ಮಾ ತಿಳಿಸಿರುವುದಾಗಿ ವರದಿ ಹೇಳಿದೆ.

1944ರಿಂದ ಈ ಪ್ರದೇಶವನ್ನು ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ನವೀಕರಿಸುವ ಕೆಲಸ ಮಾಡುತ್ತಿರುವುದಾಗಿ ಎಫ್ ಐಆರ್ ದಾಖಲಿಸಿದ ಶರ್ಮಾ ತಿಳಿಸಿದ್ದಾರೆ. ವಂಚನೆ ಆರೋಪದಡಿ 13 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 406, 419 ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here