ಮಂಗಳೂರು : ಸಮೋಸ ಮಾರಿ ಬಂದ ಹಣದಲ್ಲಿ ನಿರ್ಗತಿಕರಿಗೆ ಸಹಾಯ ಮಾಡುತ್ತಿರುವ ಯುವಕ!

0
335
Tap to know MORE!

ಮಣ್ಣಗುಡ್ಡ ಮೂಲದ ಯುವಕ ಬಿನೌಯ್ ಡಿ ಕೋಸ್ಟಾ, ನಗರದಲ್ಲಿ ಸಮೋಸಾಗಳನ್ನು ಮಾರಾಟ ಮಾಡುವ ಮೂಲಕ, ಅದರಲ್ಲಿ ಬಂದ ಆದಾಯದಿಂದ ಬಡವರಿಗೆ ಸಹಾಯ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.

ನಗರದಲ್ಲಿ ಹಸಿವಿನಿಂದ ಬಳಲುತ್ತಿರುವ ಅನೇಕ ನಿರ್ಗತಿಕರನ್ನು ಬಿನೌಯಿ ಗಮನಿಸಿದ್ದರು. ತನ್ನ ಗಳಿಕೆಯ ಲಾಭದಿಂದ, ಅವರಿಗೆ ಆಹಾರವನ್ನು ಒದಗಿಸುವ ಮೂಲಕ ನಿರ್ಗತಿಕರಿಗೆ ಸಹಾಯ ಮಾಡಲು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ.

ಮೆಕ್‌ಡೊನಾಲ್ಡ್‌ಸ್ ನಲ್ಲಿ ಕೆಲಸ ಮಾಡುತ್ತಿದ್ದ ಬಿನೌಯಿ, ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ಇದರಿಂದ ಕಂಗೆಡದೆ, ಸ್ವಾವಲಂಬಿಯಾಗಿ ದುಡಿಯಲು ನಿರ್ಧರಿಸಿದ ಇವರು, ಈ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಇಗ್ನೌ ಮೂಲಕ ಆನ್‌ಲೈನ್‌ನಲ್ಲಿ ಬಿಎ ವ್ಯಾಸಂಗ ಮಾಡುತ್ತಿರುವ ಬಿನೌಯಿ, 5 ಮತ್ತು 10 ರೂಗಳಿಗೆ ಸಮೋಸಾಗಳನ್ನು ಮಾರಾಟ ಮಾಡುತ್ತಿದ್ದಾರೆ. ಉರ್ವಾ ಮೀನು ಮಾರುಕಟ್ಟೆಯ ಎದುರು ತನ್ನ ಬೈಸಿಕಲ್‌ನಲ್ಲಿ ಸದ್ಯ ವ್ಯಾಪಾರ ನಡೆಸುತ್ತಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ತನ್ನಲ್ಲಿರುವ ಸಮೋಸಾಗಳು ಮುಗಿಯುವವರೆಗೂ ವ್ಯಾಪಾರ ನಡೆಸುತ್ತಾರೆ. ಭಾನುವಾರದಂದು ಅವರು ಅನಾಥಾಶ್ರಮಗಳಿಗೆ ಮತ್ತು ನೆಹರೂ ಮೈದಾನಕ್ಕೆ ಭೇಟಿ ನೀಡಿ ಅಲ್ಲಿ ತಂಗಿರುವ ಅನಾಥ ಮತ್ತು ನಿರ್ಗತಿಕರಿಗೆ ಆಹಾರವನ್ನು ಒದಗಿಸುತ್ತಾರೆ.

ಇವರ ಬಗ್ಗೆ ಶಾಸಕರಾಗಿರುವ ವೇದವ್ಯಾಸ್ ಕಾಮತ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

Meet Binouy D’Costa, a youth hailing from Mannagudda,Mangalore. He lost his job at McDonalds during Pandemic and chose…

Posted by Vedavyas Kamath on Monday, 24 August 2020

LEAVE A REPLY

Please enter your comment!
Please enter your name here