ಈ ಬಾರಿಯ ಮೈಸೂರು ದಸರಾ ಸರಳ, ಆದರೆ ಸಂಪ್ರದಾಯ ಬದ್ಧವಾಗಿ ನಡೆಯಲಿದೆ : ಯಡಿಯೂರಪ್ಪ

0
362
Tap to know MORE!

ಅಕ್ಟೋಬರ್‌ನಲ್ಲಿ ನಡೆಯಲಿರುವ ಜಗತ್‌ಪ್ರಸಿದ್ಧ ಮೈಸೂರು ದಸರ ಉತ್ಸವಕ್ಕೂ ಈ ಬಾರಿ ಕೊರೋನಾ ಸಾಂಕ್ರಾಮಿಕದಿಂದಾಗಿ ಹಲವಾರು ನಿರ್ಬಂಧಗಳನ್ನು ಹಾಕಲಿದ್ದೇವೆ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಶುಕ್ರವಾರ ಹೇಳಿದರು.

“ಅಕ್ಟೋಬರ್ 16 ರಿಂದ 26 ರವರೆಗೆ 10 ದಿನಗಳ ದಸರಾ ಉತ್ಸವವನ್ನು ಕೋವಿಡ್-ಭೀತಿಯ ನಿರ್ಬಂಧಗಳ ಅಡಿಯಲ್ಲಿ ಸರಳವಾಗಿ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುವುದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿಷೇಧಿಸಲಿದ್ದೇವೆ” ಎಂದರು.

“ಈ ಬಾರಿ ನಾಡ ಹಬ್ಬ ದಸರಾ ಸರಳವಾದರೂ, ಸಂಪ್ರದಾಯಗಳನ್ನು ಪಾಲಿಸುವ ಮತ್ತು ಜನರ ಭಾವನೆಗಳನ್ನು ಗೌರವಿಸುವ ಮೂಲಕ ನಡೆಯಲಿದೆ. ಕೋವಿಡ್ ಸಾಂಕ್ರಾಮಿಕದ ದೃಷ್ಟಿಯಿಂದ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ವಿಧಾನಗಳನ್ನು ರೂಪಿಸಲಾಗುವುದು” ಎಂದು ಯಡಿಯೂರಪ್ಪ ಹೇಳಿದರು.

ಸಾಮಾನ್ಯವಾಗಿ ದಸರಾ ಉತ್ಸವದ ಸಮಯದಲ್ಲಿ ಅಂದಾಜು 10 ಲಕ್ಷ ಜನರು ಮೈಸೂರಿಗೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ, ಕೋವಿಡ್ ಸಮಯದಲ್ಲಿ ನಿರ್ಬಂಧಗಳು ಇರುವುದರಿಂದ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here