ಕರ್ನಾಟಕದ ಇಬ್ಬರು ಸೇರಿದಂತೆ ದೇಶದ 47 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ಘೋಷಣೆ

0
225
Tap to know MORE!

ಬೆಂಗಳೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯವು ಈ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 47 ಶಿಕ್ಷಕರಿಗೆ 2020 ನೇ ಸಾಲಿನ ಶಿಕ್ಷಕರಿಗೆ ಕೊಡ ಮಾಡುವ ರಾಷ್ಟ್ರಪ್ರಶಸ್ತಿಯನ್ನು ಘೋಷಿಸಲಾಗಿದೆ.

ಪ್ರಶಸ್ತಿಗೆ ಭಾಜನರಾದವರಲ್ಲಿ ಕರ್ನಾಟಕದ ಇಬ್ಬರು ಶಿಕ್ಷಕರು ಇರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್, ಹಾಗೂ ಕಲಬುರಗಿ ಅಫ್ಜಲ್ ಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಶಾ ಜಗನ್ನಾಥ್ ಸೇರಿದಂತೆ ಒಟ್ಟು 47 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here