#NationalCrushRashmika : ಗೂಗಲ್ನಲ್ಲಿ ನ್ಯಾಷನಲ್ ಕ್ರಶ್ ಎಂದು ಹುಡುಕಿದಾಗ ಬರುತ್ತೆ ರಶ್ಮಿಕಾ ಮಂದಣ್ಣ ಹೆಸರು!

0
81

ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್​ ಕ್ರಶ್​ ಆಗಿದ್ದಾರೆ. ಗೂಗಲ್​ನಲ್ಲಿ 2020 national crush ಅಥವಾ national crush​ ಎಂದು ಹುಡುಕಿದರೆ, ರಶ್ಮಿಕಾ ಮಂದಣ್ಣ ಹೆಸರು ಕಾಣಿಸಿಕೊಳ್ಳುತ್ತಿದೆ. ಈ ಮೂಲಕ ರಶ್ಮಿಕಾ ಹವಾ ದೇಶದೆಲ್ಲೆಡೆ ಮೂಡಿದೆ.

ಕಿರಿಕ್​ ಪಾರ್ಟಿ ಮೂಲಕ ಕನ್ನಡದಲ್ಲಿ ಮಿಂಚಿದ್ದ ನಟಿ ತೆಲುಗಿನಲ್ಲಿ ಸ್ಟಾರ್​ ಪಟ್ಟ ಪಡೆದರು. ತೆಲುಗಿನಲ್ಲಿ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ಬೇಡಿಕೆಯ ನಟಿಯಾಗಿದ್ದಾರೆ. ತಮಿಳಿನಲ್ಲಿಯೂ ಅವರ ಮೊದಲ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿಂದೆ ಹಿಂದಿಯಲ್ಲಿ ಕರಣ್​ ಜೋಹರ್​ ಆಫರ್​ ಅನ್ನು ತಿರಸ್ಕರಿಸಿದರೂ, ಉತ್ತರ ಭಾರತದ ಅಭಿಮಾನಿಗಳನ್ನು ಸೆಳೆದು ಈಗ ನ್ಯಾಷನಲ್ ಕ್ರಶ್​ ಆಗಿ ಹುಡುಗರ ಹಾರ್ಟ್​ಬೀಟ್​ ಹೆಚ್ಚಿಸಿದ್ದಾರೆ. ಟ್ವಿಟ್ಟರ್ ನಲ್ಲೂ ಅವರ ಅಭಿಮಾನಿಗಳು #nationalcrushrashmika

ಇದನ್ನೂ ಓದಿ: ಇನ್ನು ಮುಂದೆ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್, ಸುದ್ದಿ ಪ್ರಸಾರದ ವೆಬ್ಸೈಟ್‌ಗಳು..!

ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿಯೂ ಹಿಟ್​ ಸಿನಿಮಾ ನೀಡಿರುವ ರಶ್ಮಿಕಾ ರಾತ್ರೋ ರಾತ್ರಿ ಹೇಗೆ ನ್ಯಾಷನಲ್​ ಕ್ರಶ್​ ಆಗಿದ್ದಾರೆ. ಇದಕ್ಕೆ ಕಾರಣ ಇವರ ಸಿನಿಮಾ ಹಿಂದಿಗೆ ಡಬ್​ ಆಗಿರುವುದು. ತೆಲುಗಿನ ಗೀತಾ ಗೋವಿಂದಂ, ಭೀಷ್ಮಾ, ಚಲೋ, ಸರಿಲೇರು ನಿಕ್ವೆರು ಸಿನಿಮಾ ಹಿಂದಿಗೆ ಡಬ್​ ಆಗಿದ್ದು, ಉತ್ತರ ಭಾರತದ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಸಹಾಯಕವಾಗಿದೆ.

ಹಿಂದಿ ಆಫರ್​ ತಿರಸ್ಕರಿಸಿದ್ದ ಮಂದಣ್ಣ​

ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನಲ್ಲಿ ಅತಿದೊಡ್ಡ ಬೇಡಿಕೆ ಪಡೆದುಕೊಂಡಿರುವ ನಟಿಗೆ ಈ ಹಿಂದೆ ಹಿಂದಿ ಆಫರ್​ ಸಹ ಒಲಿದು ಬಂದಿತು. ತೆಲುಗಿನ ಜರ್ಸಿ ರಿಮೇಕ್​ಗಾಗಿ ರಶ್ಮಿಕಾ ಹಿಂದಿಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡಿತು. ಆದರೆ, ಈ ಆಫರ್​ ಅನ್ನು ರಶ್ಮಿಕಾ ಸರಾಸಗಟಾಗಿ ತಳ್ಳಿಹಾಕಿದ್ದರು. ಆದರೆ, ಹಿಂದಿಯಲ್ಲಿ ಅವರ ಸಿನಿಮಾ ಡಬ್​ ಆಗುವ ಮೂಲಕ ಈಗ ಅಲ್ಲಿಯೂ ದೊಡ್ಡ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ.

LEAVE A REPLY

Please enter your comment!
Please enter your name here