BIG NEWS: NETFLIX ಸ್ಟ್ರೀಮ್ ಫೆಸ್ಟ್ | ಕಂಟೆಂಟ್‌ಗಳನ್ನು ಉಚಿತವಾಗಿ ವೀಕ್ಷಿಸಿ!

0
85

ನವದೆಹಲಿ ನ.21: ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ (Netflix) ಮುಂದಿನ ತಿಂಗಳು (ಡಿಸೆಂಬರ್) 5 ಮತ್ತು 6 ನೇ ತಾರೀಖಿಗೆ ಗ್ರಾಹಕರನ್ನು ಸೆಳೆಯಲು ಫೆಸ್ಟ್ ಆಯೋಜಿಸಿದೆ. ಈ ಉತ್ಸವದಲ್ಲಿ, ಯಾವುದೇ ಪ್ರೇಕ್ಷಕ ಎರಡು ದಿನಗಳವರೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಏನು ಬೇಕಾದರೂ ಉಚಿತವಾಗಿ ವೀಕ್ಷಿಸಬಹುದು. ಅಂದರೆ, ಪ್ರೇಕ್ಷಕರು ಎರಡು ದಿನಗಳವರೆಗೆ ಚಂದಾದಾರರಾಗದೆ ಈ ಒಟಿಟಿ ಪ್ಲಾಟ್‌ಫಾರ್ಮ್‌ನ ಲಾಭವನ್ನು ಪಡೆಯಬಹುದು.

ಡಿಸೆಂಬರ್ 5-6 ರಂದು ಭಾರತದಲ್ಲಿ ‘ಸ್ಟ್ರೀಮ್‌ಫೆಸ್ಟ್’ ಆಯೋಜಿಸುವುದಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಶುಕ್ರವಾರ ತಿಳಿಸಿದ್ದು, ಇದರ ಅಡಿಯಲ್ಲಿ ನೆಟ್‌ಫ್ಲಿಕ್ಸ್‌ನ ಚಂದಾದಾರರಲ್ಲದ ಜನರು ಸಹ ಅದರ ಸೇವೆಗಳನ್ನು ಉಚಿತವಾಗಿ ಅನುಭವಿಸಲು ಸಾಧ್ಯವಾಗಲಿದೆ. ಈ ನೆಟ್‌ಫ್ಲಿಕ್ಸ್ ಉಪಕ್ರಮದ ಉದ್ದೇಶ ಹೊಸ ಚಂದಾದಾರರನ್ನು ಸೇರಿಸುವುದು. ವಿಶೇಷವೆಂದರೆ, ಅವರು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಹಾಟ್‌ಸ್ಟಾರ್ ಮತ್ತು ಜಿ 5 ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ಭಾರತದಲ್ಲಿ ಸ್ಪರ್ಧಿಸಬೇಕಾಗಿದೆ.

ಇದನ್ನೂ ಓದಿ: ಇನ್ನು ಮುಂದೆ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್, ಸುದ್ದಿ ಪ್ರಸಾರದ ವೆಬ್ಸೈಟ್‌ಗಳು..!

ಯಾರಿಗೆ ಉಚಿತ : ಪ್ರತಿಯೊಬ್ಬ ಭಾರತೀಯರಿಗೆ
ಯಾವಾಗ ಉಚಿತ : ಡಿಸೆಂಬರ್ 5 ಮತ್ತು 6, 2020
ಹೇಗೆ : ಹೆಸರು, ಇಮೇಲ್ ಹಾಕಿ, ಪಾಸ್ವರ್ಡ್ ರಚಿಸಿ ಯಾವುದೇ ಕಂಟೆಂಟ್ ವೀಕ್ಷಿಸಬಹುದು. ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ಡಿಟೇಲ್ಸ್ ಹಾಕುವ ಅವಶ್ಯಕತೆ ಇಲ್ಲ.
ಏನನ್ನು ವೀಕ್ಷಿಸಬಹುದು : ನೆಟ್‌ಫ್ಲಿಕ್ಸ್ ನಲ್ಲಿ ಲಭ್ಯವಿರುವ ಯಾವುದೇ ಕಂಟೆಂಟ್ ವೀಕ್ಷಿಸಬಹುದು. ಆದರೆ ಎಚ್‌ಡಿ (High Definition) ವೀಡಿಯೋಗಳು ಲಭ್ಯವಿರಲ್ಲ

 

 

ಯಾವುದೇ ಚಿತ್ರ, ಸಿರೀಸ್ ಹಾಗೂ ಡಾಕ್ಯುಮೆಂಟ್ರಿ ನೋಡಬಹುದಾಗಿದೆ
ಈ ಕುರಿತು ಮಾತನಾಡಿರುವ ನೆಟ್‌ಫ್ಲಿಕ್ಸ್ ಇಂಡಿಯಾದ ಉಪಾಧ್ಯಕ್ಷೆ (ಕಂಟೆಂಟ್) ಮೋನಿಕಾ ಶೆರ್ಗಿಲ್, “ನೆಟ್‌ಫ್ಲಿಕ್ಸ್ ಮೂಲಕ ನಾವು ವಿಶ್ವಾದ್ಯಂತ ಇರುವ ಅತ್ಯಂತ ವಿಶಿಷ್ಟವಾದ ಕಥೆಗಳನ್ನು ಭಾರತದ ಮನರಂಜನಾ ಪ್ರಿಯರಿಗೆ ತರಲು ಬಯಸುತ್ತೇವೆ. ಅದಕ್ಕಾಗಿಯೇ ನಾವು ‘ಸ್ಟ್ರೀಮ್‌ಫೆಸ್ಟ್’ ಅನ್ನು ಆಯೋಜಿಸುತ್ತಿದ್ದೇವೆ. 5 ಡಿಸೆಂಬರ್ ನೆಟ್ಫ್ಲಿಕ್ಸ್ ಮಧ್ಯಾಹ್ನ 12 ರಿಂದ ಡಿಸೆಂಬರ್ 6 ರ 12 ಗಂಟೆವರೆಗೆ ಉಚಿತವಾಗಿದೆ. ಭಾರತದಲ್ಲಿ ಯಾರು ಬೇಕಾದರೂ ಎಲ್ಲಾ ಬ್ಲಾಕ್ಬಸ್ಟರ್ ಚಲನಚಿತ್ರಗಳು, ದೊಡ್ಡ ಸರಣಿಗಳು, ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ಮತ್ತು ಮನರಂಜನಾ ರಿಯಾಲಿಟಿ ಶೋ ಅನ್ನು ಎರಡು ದಿನಗಳವರೆಗೆ ವೀಕ್ಷಿಸಬಹುದು” ಎಂದು ಹೇಳಿದ್ದಾರೆ.

ಯಾವುದೇ ರೀತಿಯ ಚಂದಾ ನೀಡದೆ ಸ್ಟ್ರೀಮ್ ಮಾಡಿ
ನೆಟ್‌ಫ್ಲಿಕ್ಸ್‌ನ ಚಂದಾದಾರರಲ್ಲದವರು ತಮ್ಮ ಹೆಸರು, ಇಮೇಲ್ ಅಥವಾ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಸೈನ್ ಅಪ್ ಮಾಡಬಹುದು ಮತ್ತು ಯಾವುದೇ ಮೊತ್ತವನ್ನು ಪಾವತಿಸದೆ ಸ್ಟ್ರೀಮಿಂಗ್ ಪ್ರಾರಂಭಿಸಬಹುದು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಒಂದು ವೇಳೆ ನಿಮ್ಮ ಇ-ಮೇಲ್ ಐಡಿ ಈಗಾಗಲೇ ನೆಟ್‌ಫ್ಲಿಕ್ಸ್‌ನ ಸದಸ್ಯತ್ವವನ್ನು ಹೊಂದಿದ್ದರೆ, ನಿಮ್ಮ ಚಂದಾದಾರಿಕೆಯನ್ನು ನೀವು ನಿಲ್ಲಿಸಿದ ಸ್ಥಳದಿಂದಲೇ ನೀವು ಸ್ಟ್ರೀಮ್ ಮಾಡಬಹುದಾಗಿದೆ .

LEAVE A REPLY

Please enter your comment!
Please enter your name here