ನ್ಯೂಯಾರ್ಕ್‌ನಲ್ಲಿ ರಾರಾಜಿಸುತ್ತಿದ್ದಾನೆ ಶ್ರೀ ರಾಮ!

0
342
Tap to know MORE!

ನ್ಯೂಯಾರ್ಕ್‌: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಅಡಿಪಾಯ ಹಾಕಿದ ದಿನವೇ, ಅಮೇರಿಕಾದ ನ್ಯೂಯಾರ್ಕ್ ನಗರವು ಭಗವಾನ್ ಶ್ರೀ ರಾಮನ ಅತಿದೊಡ್ಡ ಹೈ-ಡೆಫಿನಿಷನ್(ಎಚ್‌ಡಿ) ಡಿಜಿಟಲ್ ಭಾವಚಿತ್ರವು ಪ್ರದರ್ಶನವನ್ನು ಕಂಡಿದೆ.

ಶ್ರೀ ರಾಮನ ಡಿಜಿಟಲ್ ಪ್ರದರ್ಶನವು ಟೈಮ್ಸ್ ಸ್ಕ್ವೇರ್ನಲ್ಲಿ ಡಿಸ್‌ಪ್ಲೇ ಆಗ್ತಿರೋದು ಈಗ ಭಾರೀ ಗಮನ ಸೆಳೆದಿದೆ. ಏಕೆಂದರೆ, ಅದು ವಿಶ್ವದ ಅತ್ಯಂತ ದುಬಾರಿ ಡಿಜಿಟಲ್ ಬಿಲ್ಬೋರ್ಡ್ಗಳಲ್ಲಿ ಒಂದಾಗಿದೆ. ಅದಲ್ಲದೆ, ಅಲ್ಲಿ ಯಾವುದೇ ಚಿತ್ರ ಅಷ್ಟು ಸುಲಭದಲ್ಲಿ ಪದರ್ಶನವಾಗುವುದಿಲ್ಲ.

ದೇವಾಲಯದ ಶಿಲಾನ್ಯಾಸ ಸಮಾರಂಭವನ್ನು ಆಚರಿಸಲು, ಅಮೇರಿಕಾದಲ್ಲಿ ಬೆಳಿಗ್ಗೆ 10 ಗಂಟೆಗೆ ಬೆಳಗಿದ ಚಿತ್ರವು ರಾತ್ರಿ 10 ರವರೆಗೆ ಮುಂದುವರಿಯುತ್ತದೆ.

ಇಂದು ಬೆಳಿಗ್ಗೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ಸಮಾರಂಭದ ಗುರುತಿನಲ್ಲಿ, ಒಂದು ಫಲಕವನ್ನು ಅನಾವರಣಗೊಳಿಸುವುದರ ಜೊತೆಗೆ, ಪ್ರಧಾನಿ ಮೋದಿ, ‘ಶ್ರೀ ರಾಮ ಜನ್ಮಭೂಮಿ ಮಂದಿರ’ ಕುರಿತು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಈ ದೇವಾಲಯವು ಭಾರತದ ಸಂಸ್ಕೃತಿಯ ಆಧುನಿಕ ಸಂಕೇತವಾಗಿ, ಶಾಶ್ವತ ಭರವಸೆ, ರಾಷ್ಟ್ರೀಯ ಭಾವನೆ ಮತ್ತು ಕೋಟ್ಯಂತರ ನಾಗರಿಕರ ಸಾಮೂಹಿಕ ಶಕ್ತಿಯ ಸಂಕೇತವಾಗಲಿದೆ ಎಂದು ಮೋದಿ ಹೇಳಿದರು.

LEAVE A REPLY

Please enter your comment!
Please enter your name here