ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ನಿರ್ದೇಶಕ ನಿಶಿಕಾಂತ್ ಕಾಮತ್ ಇಂದು ನಿಧನರಾದರು. ವಿವಿಧ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ ಜನಪ್ರಿಯ ನಿರ್ದೇಶಕರಿಗೆ, ಕಳೆದ ತಿಂಗಳು ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆ ಕಾಣಿಸಿಕೊಂಡಿತ್ತು. ಯಕೃತ್ತಿನ ಕಾಯಿಲೆಯಾಗಿ ಮಾರ್ಪಟ್ಟ ಕಾಮಾಲೆ ರೋಗ ಪತ್ತೆಯಾದ ನಂತರ ಜುಲೈ 31 ರಂದು ಕಾಮತ್ರನ್ನು ಹೈದರಾಬಾದ್ನ ಎಐಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಂದಿನಿಂದ ಆಸ್ಪತ್ರೆಯಲ್ಲಿದ್ದ ಅವರು, ಇಂದು ಕೊನೆಯುಸಿರೆಳೆದರು.
ಅಜಯ್ ದೇವ್ಗನ್ ಅಭಿನಯದ ದೃಶ್ಯಂ, ಇರ್ಫಾನ್ ಖಾನ್ ಅಭಿನಯದ ಮದಾರಿ, ಜಾನ್ ಅಬ್ರಹಾಂ ಅಭಿನಯದ ಫೋರ್ಸ್ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ ಮುಂಬೈ ಮೇರಿ ಜಾನ್ ಇನ್ನಿತರ ಚಲನಚಿತ್ರಗಳ ನಿರ್ದೇಶಕರಾಗಿ ಕಾಮತ್ ಹೆಸರುವಾಸಿಯಾಗಿದ್ದರು. ಮರಾಠಿ ಚಿತ್ರರಂಗದಲ್ಲಿ ಅವರ ಕೊಡುಗೆ ಕೂಡ ಪ್ರಮುಖವಾಗಿದೆ.