ಗಾಂಧಿಯೇತರ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು : ಪ್ರಿಯಾಂಕಾ ಗಾಂಧಿ

0
186
Tap to know MORE!

ಕಾಂಗ್ರೆಸ್ನ ಪ್ರಿಯಾಂಕ ಗಾಂಧಿ ವಾದ್ರಾ ಅವರು ಗಾಂಧಿಯೇತರ ಅಭ್ಯರ್ಥಿ ಪಕ್ಷದ ಮುಖ್ಯಸ್ಥನಾಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಸದ್ಯ, ಸೋನಿಯಾ ಗಾಂಧಿಯವರು ಒಂದು ಪಕ್ಷದ ಮಧ್ಯಂತರ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಕಾರ್ಯವಿಧಾನವು ಜಾರಿಗೆ ಬರುವವರೆಗೆ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಘೋಷಿಸಿತ್ತು.

ಈ ಹಿಂದೆ ರಾಹುಲ್ ಗಾಂಧಿಯವರು ಒಬ್ಬ ಗಾಂಧಿಯೇತರ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು ಎಂದು ಕೇಳಿಕೊಂಡಿದ್ದರು. ನಾನೂ ಅದನ್ನು ಬೆಂಬಲಿಸುತ್ತೇನೆ. ಒಂದು ವೇಳೆ ಪಕ್ಷದ ಮುಖ್ಯಸ್ಥತರಾಗುವ ಗಾಂಧಿಯೇತರ ಅಭ್ಯರ್ಥಿ ನಾನು ಉತ್ತರಪ್ರದೇಶದಲ್ಲಿ ಸ್ಪರ್ಧಿಸುವುದು ಬೇಡವೆಂದು ಹೇಳಿ ಅಂಡಮಾನ್ ನಿಕೋಬಾರ್ ಗೆ ಹೋಗಲು ತಿಳಿಸಿದರು ನಾನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ ಎಂದು ಪ್ರಿಯಾಂಕ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here