OLX ನಲ್ಲಿ ಪ್ರಧಾನಿ ಮೋದಿಯವರ ಕಛೇರಿ ಮಾರಾಟಕ್ಕಿಟ್ಟ ದುಷ್ಕರ್ಮಿಗಳು | ನಾಲ್ವರ ಬಂಧನ

0
196
Tap to know MORE!

ವಾರಣಾಸಿ ಡಿ.18: ವಾರಣಾಸಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕಚೇರಿಯು ಮಾರಾಟಕ್ಕಿದೆ ಎಂಬ ಜಾಹೀರಾತು OLX ನಲ್ಲಿ ಕಂಡುಬಂದಿದೆ. ಈ ಸಂಬಂಧ ದೂರು ಬಂದಾಗ ಆಘಾತಕ್ಕೊಳಗಾದ ವಾರಣಾಸಿಯ ಪೊಲೀಸರು ಇದರ ಹಿಂದೆ ನಿರತವಾಗಿದ್ದ ಕೈಗಳ ಹುಡುಕಾಡತೊಡಗಿದರು.

ಕೆಲವು ದುಷ್ಕರ್ಮಿಗಳು ಆನ್‌ಲೈನ್ ಮಾರುಕಟ್ಟೆಯಾದ OLX ನಲ್ಲಿ 7.5 ಕೋಟಿ ರೂ.ಗೆ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪಿಎಂಒ ಕಚೇರಿ ಗುರುಧಾಮ್ ಕಾಲೋನಿಯಲ್ಲಿದೆ.

ಇದನ್ನೂ ಓದಿ: ಉಡುಪಿ : ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಬೈಕ್ ಕದ್ದು ಪರಾರಿ!

ತನ್ನನ್ನು ಲಕ್ಷ್ಮೀಕಾಂತ್ ಓಜಾ ಎಂದು ಗುರುತಿಸಿಕೊಂಡ ವ್ಯಕ್ತಿಯ ಐಡಿಯಿಂದ ಜಾಹೀರಾತನ್ನು ಹಂಚಿಕೊಳ್ಳಲಾಗಿದೆ. ಜಾಹೀರಾತನ್ನು ತಕ್ಷಣವೇ ತೆಗೆದುಹಾಕಲಾಗಿದೆ ಮತ್ತು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಾರಣಾಸಿ ಎಸ್‌ಎಸ್‌ಪಿ ಅಮಿತ್ ಕುಮಾರ್ ಪಾಠಕ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಈವರೆಗೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

‘ಹೌಸ್ & ವಿಲ್ಲಾ’ ವಿಭಾಗದಲ್ಲಿ ಜಾಹೀರಾತು ಸಂಖ್ಯೆ ಐಡಿ 1612346492 ಅನ್ನು OLXನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅದರಲ್ಲಿ “ಒಂದು ಸ್ನಾನಗೃಹ, ನಾಲ್ಕು ಮಲಗುವ ಕೋಣೆ” ಎಂದು ಪಟ್ಟಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು “6,500 ಚದರ ಅಡಿ ವಿಸ್ತೀರ್ಣ, ಎರಡು ಅಂತಸ್ತಿನ ಕಟ್ಟಡ ಈಶಾನ್ಯಕ್ಕೆ ಎದುರು ಮುಖವಾಗಿ ಕಾರ್ ಪಾರ್ಕಿಂಗ್” ಮುಂತಾದ ವಿವರಗಳನ್ನು ಹೊಂದಿದೆ. ಆಸ್ತಿಯ ಹೆಸರನ್ನು ‘ಪಿಎಂಒ ಕಚೇರಿ ವಾರಣಾಸಿ’ ಎಂದು ನೀಡಲಾಗಿದೆ.

ವಧುಗೆ ಕೊರೋನಾ | ಕೋವಿಡ್ ಆರೈಕೆ ಕೇಂದ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ!

LEAVE A REPLY

Please enter your comment!
Please enter your name here