ಆನ್ಲೈನ್ ಚೆಸ್ ಒಲಿಂಪಿಯಾಡ್ – ಚೀನಾವನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಭಾರತ!

1
417
Tap to know MORE!

ಪ್ರಾಥಮಿಕ ಸುತ್ತಿನ ಅಂತಿಮ ಪಂದ್ಯದಲ್ಲಿ ಚೀನಾವನ್ನು ಸೋಲಿಸಿದ ಭಾರತ, FIDE ಆನ್‌ಲೈನ್ ಚೆಸ್ ಒಲಿಂಪಿಯಾಡ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಭಾರತದ ಹದಿನೈದು ವರ್ಷದ ಆರ್ ಪ್ರಜ್ಞಾನಂದ್ ಅವರ ಚಾಣಾಕ್ಷ ಆಟವು ಬಹಳ ಛಾಪು ಮೂಡಿಸಿತು.

ಒಂಬತ್ತನೇ ಮತ್ತು ಪ್ರಾಥಮಿಕ ಸುತ್ತಿನ ಅಂತಿಮ ಪಂದ್ಯದಲ್ಲಿ ಪ್ರಜ್ಞಾನಂದ್ ಮತ್ತು ದಿವ್ಯಾ ದೇಶಮುಖ್ ನಿರ್ಣಾಯಕ ಗೆಲುವುಗಳು ಭಾರತಕ್ಕೆ ಸ್ಪರ್ಧೆಯಲ್ಲಿ ಮುಂದುವರೆಯಲು ಬಹಳ ಸಹಕಾರಿಯಾಯಿತು.

ಈ ಗೆಲುವಿನ ಫಲವಾಗಿ, ಪೂಲ್ ಎ ಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಆನ್‌ಲೈನ್ ಈವೆಂಟ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
“ನಾನು ಭಾರತೀಯ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ ಮತ್ತು ನಾನು ಜೂನಿಯರ್ ಕೋಡ್‌ನಲ್ಲಿ ಆಡುತ್ತಿದ್ದೇನೆ. ಚೀನಾವನ್ನು ಸೋಲಿಸುವ ಮೂಲಕ ನಾವು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದ್ದೇವೆ. ಇದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾನು ಕ್ವಾರ್ಟರ್ ಫೈನಲ್‌ಗಾಗಿ ಎದುರು ನೋಡುತ್ತಿದ್ದೇನೆ. ಭಾರತಕ್ಕೆ ಪದಕಗಳನ್ನು ತರುವುದು ನನ್ನ ಮೊದಲ ಗುರಿ. ನನ್ನ ವೈಯಕ್ತಿಕ ರೇಟಿಂಗ್ ಅನ್ನು ಸುಧಾರಿಸುವುದು ಭವಿಷ್ಯದ ಗುರಿ” ಎಂದು ಆರ್ ಪ್ರಜ್ಞಾನಂದ್ ಎಎನ್‌ಐಗೆ ತಿಳಿಸಿದರು.

“ನಾನು ಗ್ರ್ಯಾಂಡ್ ಮಾಸ್ಟರ್ ಆದಾಗ ನನಗೆ ಪ್ರಾಯೋಜಕತ್ವವನ್ನು ಒದಗಿಸಿದ್ದಕ್ಕಾಗಿ ನಿರ್ಮಲಾ ಸೀತಾರಾಮನ್‌ ಅವರಿಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ಅವರ ಸಹಾಯದ ನಂತರ ನಾನು ಸಾಕಷ್ಟು ಸುಧಾರಿಸಿದೆ. ಅವರು ನನ್ನನ್ನು ಟ್ವಿಟ್ಟರ್ನಲ್ಲಿ ಅಭಿನಂದಿಸಿದಾಗ ನನಗೆ ತುಂಬಾ ಸಂತೋಷವಾಯಿತು” ಎಂದು ಅವರು ಹೇಳಿದರು.
ಕಳೆದ ವರ್ಷ, ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಆರ್.ಪ್ರಜ್ಞಾನಂದ್ ಭಾರತಕ್ಕೆ 18 ವರ್ಷದೊಳಗಿನ ಓಪನ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

1 COMMENT

LEAVE A REPLY

Please enter your comment!
Please enter your name here