ಪ್ರಧಾನಿ ಮೋದಿ ರಾಮ ಮಂದಿರದ ಬದಲಿಗೆ ಹಿಂದೂ ರಾಷ್ಟ್ರಕ್ಕೆ ಅಡಿಪಾಯ ಹಾಕಿದ್ದಾರೆ : ಓವೈಸಿ

0
219
Tap to know MORE!

“ಭಾರತವು ಜಾತ್ಯತೀತ ದೇಶ. ರಾಮ ಮಂದಿರಕ್ಕೆ ಅಡಿಪಾಯ ಹಾಕುವ ಮೂಲಕ ಪ್ರಧಾನಮಂತ್ರಿಯು ತಾವು ಮಾಡಿದ ಪ್ರಮಾಣವನ್ನು ಉಲ್ಲಂಘಿಸಿದಂತಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಸೋಲು” ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಆಸಾವುದ್ದೀನ್ ಓವೈಸಿ ಹೇಳಿದ್ದಾರೆ.

“ಪ್ರಧಾನಮಂತ್ರಿ ಮೋದಿ ಭೂಮಿಪೂಜೆಗೆ ಹಾಜರಾಗುವ ಮೂಲಕ ರಾಮ ಮಂದಿರ ಮಾತ್ರವಲ್ಲ; ಹಿಂದೂ ರಾಷ್ಟ್ರಕ್ಕೆ ಅಡಿಪಾಯ ಹಾಕಿದ್ದಾರೆ. ಅವರು ತಮ್ಮ ಸಾಂವಿಧಾನಿಕ ಪ್ರಮಾಣ ಮತ್ತು ಜಾತ್ಯತೀತತೆಯ ಮೂಲ ಸಿದ್ಧಾಂತವನ್ನೇ ಉಲ್ಲಂಘಿಸಿದ್ದಾರೆ” ಎಂದು ಅವರು ಹೇಳಿದರು.

ಇದಲ್ಲದೆ, ಅವರು ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ

  • ಮೋದಿಯವರು ನಮ್ಮ ದೇಶದ ಸ್ವಾತಂತ್ರ್ಯ ದಿನವನ್ನು (ಆಗಸ್ಟ್ 15) ಇಂದಿನ ದಿನದೊಂದಿಗೆ ಸಮೀಕರಿಸಿದೆ. ಯಾವ ಸ್ವಾತಂತ್ರ್ಯದ ಬಗ್ಗೆ ಪ್ರಧಾನಿ ಹೇಳಲು ಪ್ರಯತ್ನಿಸುತ್ತಿದ್ದಾರೆ?
  • ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದಿನ ದಿನವನ್ನು ನವ ಭಾರತದ ಆರಂಭವಾಗಿ ಗುರುತಿಸಲಾಗಿದೆ ಎಂದು ಅವರು ಯಾವ ಅರ್ಥದಲ್ಲಿ ಹೇಳಿದರು?
    • ಅವರು ಹಿಂದೂ ರಾಷ್ಟ್ರವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ, ಅಲ್ಲಿ ಮುಸ್ಲಿಮರನ್ನು 2 ನೇ ದರ್ಜೆಯ ನಾಗರಿಕರನ್ನಾಗಿ ಮಾಡಲಾಗುತ್ತಿದೆ ಎಂದು ಇದೇ ವೇಳೆ ಹೇಳಿದರು.
  • ಕಾಂಗ್ರೆಸ್ ಸೇರಿದಂತೆ ಎಲ್ಲಾ ಜಾತ್ಯತೀತ ಪಕ್ಷಗಳಿಗೆ ನನ್ನದೊಂದು ಪ್ರಶ್ನೆ – ಭೂಮಿ ಪೂಜೆ ಸಮಾರಂಭವು ಸಹೋದರತ್ವದ ಸಂಕೇತ ಹೇಗಾಗುತ್ತದೆ? ಒಂದು ಮಸೀದಿ ನಾಶವಾಗಿದೆ, ಸಾವಿರಾರು ಜನರು ಬಲಿಯಾಗಿದ್ದಾರೆ. ಇದು ಸಹೋದರತ್ವವೇ? ಎಂದು ಓವೈಸಿ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here