ಆಗಸ್ಟ್ 5 : “ಶೋಷಣೆಯ ದಿನ” ವಾಗಿ ಕಾಣಲಿರುವ ಪಾಕಿಸ್ತಾನ!

0
246
Tap to know MORE!

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತವು ಆಗಸ್ಟ್ 5 , 2019ರಂದು ರದ್ದುಪಡಿಸಿತ್ತು. ಭಾರತದಲ್ಲಿ, ಅದಕ್ಕೀಗ ಒಂದು ವರ್ಷದ ಆಚರಣೆ. ಆದರೆ ಪಾಕಿಸ್ತಾನದಲ್ಲಿ ಆಗಸ್ಟ್ 5 ರಂದು “ಯೌಮ್-ಇ-ಇಸ್ತೇಸಲ್ (ಶೋಷಣೆಯ ದಿನ)” ಎಂದು ಆಚರಿಸಲಿದೆ ಮತ್ತು ಆ ದಿನದಂದು ಪಾಕಿಸ್ತಾನ ದೇಶಾದ್ಯಂತ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಯೋಜಿಸಿದೆ ಎಂದು ತಿಳಿದುಬಂದಿದೆ.

ಭಾರತದ “ಕಾನೂನುಬಾಹಿರ ಕ್ರಮಗಳನ್ನು” ವಿರೋಧಿಸಿ, ಹೊಸ ಕಾನೂನಿನಿಂದ ತುಳಿತಕ್ಕೊಳಗಾಗಿರುವ ಕಾಶ್ಮೀರಿಗಳೊಂದಿಗೆ ಐಕಮತ್ಯವನ್ನು ವ್ಯಕ್ತಪಡಿಸಲು ಈ ದಿನವನ್ನು ಆಚರಿಸಲಾಗುತ್ತದೆ ಎಂದು ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಹೇಳಿದೆ.

ಕಳೆದ ವರ್ಷ ಭಾರತೀಯ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಮುಸ್ಲಿಂ ಬಹುಸಂಖ್ಯಾತ ಜಮ್ಮು ಕಾಶ್ಮೀರವನ್ನು ದುರ್ಬಲಗೊಳಿಸಲು ದಬ್ಬಾಳಿಕೆ, ಚಿತ್ರಹಿಂಸೆ ಮತ್ತು ವಂಚನೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತನ್ನ ಹೇಳಿಕೆಯನ್ನು ಹೊರಡಿಸಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ (ಆಗಸ್ಟ್ 5) ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಫರಾಬಾದ್‌ಗೆ ಭೇಟಿ ನೀಡಿ, ಅಲ್ಲಿನ ವಿಧಾನಸಭೆಯನ್ನು ಉದ್ದೇಶಿಸಿ, ಪಾಕಿಸ್ತಾನವು ಕಾಶ್ಮೀರದ ಜನರ “ಸ್ವಾತಂತ್ರ್ಯ ಹೋರಾಟ” ಮತ್ತು ಅವರ ಸಂಕಟಗಳನ್ನು ಇನ್ನಷ್ಟು ಎತ್ತಿ ತೋರಿಸಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here