ಜಮ್ಮು ಕಾಶ್ಮೀರವನ್ನು ಸೇರಿಸಿ, ತನ್ನ ಹೊಸ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿದ ಪಾಕಿಸ್ತಾನ!

0
5926
Tap to know MORE!

ಇಸ್ಲಾಮಾಬಾದ್:  ಭಾರತೀಯ ಸಂವಿಧಾನದ ವಿಧಿ 370 ಮತ್ತು ವಿಧಿ 35 ಎ ರದ್ದುಪಡಿಸಿ ಆಗಸ್ಟ್ 5 ರಂದು 1 ವರ್ಷ ತುಂಬುವ ಹಿನ್ನೆಲೆಯಲ್ಲಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೊಸ ರಾಜಕೀಯ ನಕ್ಷೆಯನ್ನು ಅನಾವರಣಗೊಳಿಸಿದ್ದಾರೆ.

ನಕ್ಷೆಯಲ್ಲಿ ಪಾಕಿಸ್ತಾನದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವನ್ನು ಸೇರಿಸಲಾಗಿದೆ. ಹೊಸ ರಾಜಕೀಯ ನಕ್ಷೆಯನ್ನು ವಿಶ್ವಸಂಸ್ಥೆಯಲ್ಲೂ ಪ್ರಸ್ತುತಪಡಿಸಲು ಖಾನ್ ನಿರ್ಧರಿಸಿದ್ದಾರೆ.

ಇಮ್ರಾನ್ ಖಾನ್ ಮಂತ್ರಿಮಂಡಲವು ಹೊಸ ನಕ್ಷೆಯನ್ನು ಅನುಮೋದಿಸಿತು. ಇದರಲ್ಲಿ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ಸಂಯೋಜಿಸಲಾಗಿದೆ. ಈ ಅಕ್ರಮ ನಕ್ಷೆಯು ಜಮ್ಮು ಮತ್ತು ಕಾಶ್ಮೀರವನ್ನು “ಭಾರತವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಜೆ & ಕೆ – ವಿವಾದಿತ ಪ್ರದೇಶ – ಸಂಬಂಧಿತ ಯುಎನ್‌ಎಸ್‌ಸಿ ನಿರ್ಣಯಗಳಿಗೆ ಅನುಗುಣವಾಗಿ ಅಂತಿಮವಾಗಿ ನಿರ್ಧರಿಸುತ್ತದೆ” ಎಂದು ತೋರಿಸುತ್ತದೆ. ಆ ಮೂಲಕ ಪಾಕಿಸ್ತಾನವು ಭಾರತ ಸರ್ಕಾರಕ್ಕೆ ಸವಾಲು ಹಾಕಿದೆ.

ಇದನ್ನೂ ಓದಿ : ಆಗಸ್ಟ್ 5 ರಂದು “ಶೋಷಣೆಯ ದಿನವನ್ನಾಗಿ ಆಚರಿಸಲು ಪಾಕ್ ಸಿದ್ಧತೆ

ಮಂಗಳವಾರ ಹೊಸ ನಕ್ಷೆಯನ್ನು ಅಂಗೀಕರಿಸಿದ ಫೆಡರಲ್ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಮ್ರಾನ್ ಖಾನ್, “ಇದು ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ಐತಿಹಾಸಿಕ ದಿನ. ನಾವು ಪಾಕಿಸ್ತಾನದ ಹೊಸ ರಾಜಕೀಯ ನಕ್ಷೆಯನ್ನು ತಯಾರಿಸಿದ್ದೇವೆ” ಎಂದರು.

ಹೊಸ ನಕ್ಷೆಯನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲಿಸುತ್ತವೆ ಎಂದರು. “ಈ ನಕ್ಷೆಯು ಕಳೆದ ವರ್ಷ ಆಗಸ್ಟ್ 5 ರ ಭಾರತ ಸರ್ಕಾರದ ಕಾನೂನುಬಾಹಿರ ಕೃತ್ಯವನ್ನು ಸಹ ವಿರೋಧಿಸುತ್ತದೆ” ಎಂದು ಪ್ರಧಾನಿ ಹೇಳಿದರು.

LEAVE A REPLY

Please enter your comment!
Please enter your name here