ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ ಪಶು ಸಂಜೀವಿನಿ ಸಹಾಯವಾಣಿಗೆ ಚಾಲನೆ

0
237
Tap to know MORE!

ಇನ್ನು ಮುಂದೆ ಮನುಷ್ಯರಂತೆ, ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುವುದು. ರಾಜ್ಯದಲ್ಲಿ ಇಂದು ತನ್ನ ಮಹತ್ವಾಕಾಂಕ್ಷೆಯ ಪಶು ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಾನವರಿಗೆ ಸಹಾಯವಾಣಿ ಸಂಖ್ಯೆ 108 ಆಗಿದ್ದರೆ, ಪಶು ಸಂಜೀವಿನಿ ಕಾರ್ಯಕ್ರಮದಡಿ, ಪ್ರಾಣಿಗಳಿಗೆ ತುರ್ತು ಚಿಕಿತ್ಸೆ ಒದಗಿಸಲಃ ತುರ್ತು ಸಹಾಯವಾಣಿ ಸಂಖ್ಯೆ 1962 ಆಗಿರುತ್ತದೆ. ಇದನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಔಪಚಾರಿಕವಾಗಿ ಬೆಂಗಳೂರಿನ ವಿಧಾನಸೌಧಾ ಎದುರು ಇಂದು ಪ್ರಾರಂಭಿಸಿದರು.

ನುಡಿದಂತೆ ನಡೆದ ನಮ್ಮ BSY ಸರಕಾರ.
ಪ್ರಾಣಿಗಳಿಗೆ ವಿಶೇಷ ರೀತಿಯ "ಪಶು ಸಂಜೀವಿನಿ"ಆಂಬುಲೆನ್ಸ್ ಸೇವೆ ಲೋಕಾರ್ಪಣೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ BSY ಯಡಿಯೂರಪ್ಪನವರಿಗೆ ಹಾಗೂ ಪಶು ಸಂಗೋಪನಾ ಮಾನ್ಯಸಚಿವರಾದ ಪ್ರಭು ಚೌಹಾಣ್ ರವರಿಗೆ ಅಭಿನಂದನೆಗಳು.

Posted by BJP Dakshina Kannada on Thursday, 20 August 2020

ರಾಜ್ಯದಲ್ಲಿ ಪಶು ಸಂಜೀವಿನಿ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮುಖ್ಯಮಂತ್ರಿಗಳು, ಉದ್ಘಾಟನೆಯ ಸಂಕೇತವಾಗಿ, ಹಸುವಿಗೆ ಹೂಮಾಲೆ ಹಾಕಿದರು.

“ಗೋಹತ್ಯೆ ವಿರೋಧಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಮತ್ತು ಶೀಘ್ರದಲ್ಲೇ ಸೂಕ್ತ ಕಾನೂನನ್ನು ತರಲಿದೆ ಎಂದು ಯಡಿಯೂರಪ್ಪ ಹೇಳಿದರು. ನಾವು ಹಸುಗಳನ್ನು ಮತ್ತು ಅದರ ಸಂತತಿಯನ್ನು ರಕ್ಷಿಸಲು ನಿರ್ಧರಿಸಿದ್ದೇವೆ,” ಎಂದು ಯಡಿಯೂರಪ್ಪ ಹೇಳಿದರು.

ಜಾನುವಾರುಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೆ, ಸಹಾಯವಾಣಿ ಸಂಖ್ಯೆ 1962 ಅನ್ನು ಡಯಲ್ ಮಾಡಬೇಕಾಗುತ್ತದೆ ಮತ್ತು ಅರ್ಹ ಪಶುವೈದ್ಯಕೀಯ ಸಿಬ್ಬಂದಿಯವರು ಮತ್ತು ಸಲಕರಣೆಗಳೊಂದಿಗೆ ಮಾಲೀಕರ ಮನೆ ಬಾಗಿಲಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ದನಗಳನ್ನು ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗುತ್ತದೆ.

ಮೊದಲ ಹಂತದಲ್ಲಿ, 15 ಜಿಲ್ಲೆಗಳೊಂದಿಗೆ ಪಶು ಸಂಜೀವಿನಿ ಕಾರ್ಯಕ್ರಮವು 15 ವಾಹನಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಕಾರ್ಯಕ್ರಮವನ್ನು ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಮತ್ತು ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಸೇವೆಗೆ ಸೇರಿಸಲಾಗುತ್ತದೆ ಪಶುಸಂಗೋಪನಾ ಸಚಿವ ಪ್ರಭು ಚೌಹಾನ್ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮತ್ತು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಲ್ಸಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here