PM CARES ಫಂಡ್‌ಗೆ ₹37 ಲಕ್ಷ ದೇಣಿಗೆ ನೀಡಿದ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮಿನ್ಸ್

0
273
Tap to know MORE!

ಮುಂಬೈ: ಐಪಿಎಲ್‍ನಲ್ಲಿ ಕೋಲ್ಕತ್ತಾ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ಎರಡನೇ ಅಲೆಯ ನಡುವೆ ಭಾರತದಲ್ಲಿ ತಲೆದೂರಿರುವ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನಿಧಿಗೆ (PM CARES) 50,000 ಡಾಲರ್ (37 ಲಕ್ಷ ರೂ.) ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಮಿನ್ಸ್, ನಾನು ಭಾರತ ದೇಶವನ್ನು ತುಂಬಾ ಇಷ್ಟಪಡುತ್ತೇನೆ. ಕಳೆದ ಹಲವು ವರ್ಷಗಳಿಂದ ನಾನು ಭಾರತಕ್ಕೆ ಬರುತ್ತಿದ್ದೇನೆ. ಬಂದಾಗಲೆಲ್ಲಾ ಇಲ್ಲಿನ ಜನ ಪ್ರೀತಿ, ವಾತ್ಸಲ್ಯದಿಂದ ಸಲಹುತ್ತಿದ್ದಾರೆ. ಆದರೆ ಇದೀಗ ಕೊರೊನಾ ಮಹಾಮಾರಿಯಿಂದ ಜನ ಬಳಲುತ್ತಿದ್ದಾರೆ. ಇದನ್ನು ಕಂಡು ನನಗೆ ತುಂಬಾ ದುಖಃವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ನಡುವೆಯೂ ದ.ಕ – ಉಡುಪಿ ಜಿಲ್ಲೆಯಲ್ಲಿ ನಡೆದವು ಒಟ್ಟು 726 ಮದುವೆಗಳು!

ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೂ ಕೂಡ ಐಪಿಎಲ್ ಪಂದ್ಯಾಟಗಳು ನಡೆಯುತ್ತಿರುವುದನ್ನು ಕಂಡು ನಾನು ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದರೊಂದಿಗೆ ಭಾರತೀಯರಿಗೆ ಲಾಕ್‍ಡೌನ್ ಮಧ್ಯೆ ಕೆಲ ಕಾಲ ವಿಶ್ರಾಂತಿ ಮತ್ತು ಮನರಂಜನೆಯನ್ನು ನೀಡಲು ಐಪಿಎಲ್ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನಾನೊಬ್ಬ ಆಟಗಾರನಾಗಿ ನನ್ನನ್ನು ಇಷ್ಟಪಡುವ ಜನರಿಗೆ ಸಹಾಯದ ಹಸ್ತ ಚಾಚಲು ಬಯಸುತ್ತೇನೆ. ಹಾಗಾಗಿ ಭಾರತದ ಪ್ರಧಾನಿ ಅವರ ನಿಧಿಗೆ ದೇಣಿಗೆ ನೀಡಲು ಬಯಸುತ್ತೇನೆ. ಪ್ರಮುಖವಾಗಿ ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಖರೀದಿಗಾಗಿ ಈ ಹಣ ನೀಡಲು ಮುಂದಾಗಿದ್ದೇನೆ. ನಾನು ಇತರ ಐಪಿಎಲ್‍ನ ಸಹ ಆಟಗಾರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮನವಿ ಮಾಡುತ್ತೇನೆ. ನಾನು ಈಗಾಗಲೇ 50,000 ಡಾಲರ್‍ ಗಳನ್ನು ದೇಣಿಗೆಯಾಗಿ ನೀಡಿದ್ದೇನೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here