ಪಿಎಂ ಕೇರ್ಸ್ ನಿಧಿಯನ್ನು ಎನ್‌ಡಿಅರ್‌ಎಫ್ ಗೆ ವರ್ಗಾಯಿಸುವ ಅಗತ್ಯವಿಲ್ಲ – ಸುಪ್ರೀಂಕೋರ್ಟ್

0
366
Tap to know MORE!

ಪಿಎಂ-ಕೇರ್ಸ್ ನಿಧಿಗೆ ಬರುವ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್‌ಡಿಆರ್‌ಎಫ್) ವರ್ಗಾಯಿಸುವ ಅಗತ್ಯವಿಲ್ಲ. ಆದರೆ ಜನರು ಸ್ವಯಂಪ್ರೇರಣೆಯಿಂದ ಎನ್‌ಡಿಆರ್‌ಎಫ್‌ಗೆ ಕೊಡುಗೆ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಇರುವ ತ್ರಿಸದಸ್ಯ ಪೀಠ ಪಿಎಂ ಕೇರ್ಸ್ ಫಂಡ್‌ನಿಂದ ಎನ್‌ಡಿಆರ್‌ಎಫ್‌ಗೆ ಹಣವನ್ನು ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ನಾಗರಿಕರು ಮತ್ತು ಕಾರ್ಪೊರೇಟ್‌ಗಳು ಎನ್‌ಡಿಆರ್‌ಎಫ್‌ನಲ್ಲಿ ಹಣವನ್ನು ಠೇವಣಿ ಇರಿಸಲು ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಪೀಠ ಹೇಳಿದೆ ಮತ್ತು ಪಿಎಂ ಕೇರ್ಸ್ ಫಂಡ್, ಎನ್‌ಡಿಆರ್‌ಎಫ್‌ನಿಂದ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಸ್ಪಷ್ಟಪಡಿಸಿದೆ.

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಎನ್‌ಡಿಆರ್‌ಎಫ್ ಅನ್ನು ಅಧಿಕಾರಿಗಳು ಬಳಸಿಕೊಳ್ಳುತ್ತಿಲ್ಲ ಮತ್ತು ಪಿಎಂ ಕೇರ್ಸ್ ಫಂಡ್ ಅನ್ನು ಸ್ಥಾಪಿಸಿರುವುದು ವಿಪತ್ತು ನಿರ್ವಹಣಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿದೆ ಎಂದು ಮನವಿಯಲ್ಲಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಹೇಳಿತ್ತು.

ಕೋವಿಡ್ -19 ಗಾಗಿ ಕೇಂದ್ರವು ಹೊಸ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಬೇಕಾಗಿತ್ತು ಮತ್ತು ಜೈವಿಕ ವಿಪತ್ತನ್ನು ನಿಭಾಯಿಸುವತ್ತ ಗಮನಹರಿಸಿ 2019 ರ ಡಿಸೆಂಬರ್‌ನಲ್ಲಿ ರೂಪಿಸಲಾದ ರಾಷ್ಟ್ರೀಯ ಯೋಜನೆಯನ್ನು ಅವಲಂಬಿಸಿರಬಾರದು ಎಂಬ ವಕೀಲ ಪ್ರಶಾಂತ್ ಭೂಷಣ್ ಅವರ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿತು.

LEAVE A REPLY

Please enter your comment!
Please enter your name here