ಲಾಕ್ ಡೌನ್ ಸಮಯದಲ್ಲಿ ಬಡ ಹಾಗೂ ನಿರ್ಗತಿಕರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ರಾಜಕೀಯ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು “ನಾನು ರಾಜಕೀಯಕ್ಕೆ ಬಂದರೆ, ಶೇಕಡಾ 100 ಪರಿಶ್ರಮ ಜನರ ಅಭಿವೃದ್ದಿಗೆ ನೀಡುತ್ತೇನೆ. ಯಾರಿಗೂ ಯಾವುದೇ ಸಮಸ್ಯೆ ಇರಲ್ಲ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ, ಸಮಯ ಕಳೆಯುತ್ತೇನೆ ಎಂದಿದ್ದಾರೆ”.
ಕಳೆದ 10 ವರ್ಷಗಳಿಂದ ನಾನು ರಾಜಕೀಯಕ್ಕೆ ಸೇರಲು ಆಫರ್ಗಳನ್ನು ಪಡೆಯುತ್ತಿದ್ದೇನೆ. ‘ನೀವು ಮಹಾನ್ ನಾಯಕರಾಗುತ್ತೀರಿ’ ಎಂದು ಅನೇಕ ಜನರು ಹೇಳಿದ್ದರು. ಆದರೆ ನಾನು ನಟನಾಗಲು ನಾನು ಬಯಸುತ್ತೇನೆ. ಸಿನಿಮಾ ಹಾಗೂ ರಾಜಕೀಯ ಎರಡೂ ದೋಣಿಗಳಲ್ಲಿ ತಾವು ಪ್ರಯಾಣ ಮಾಡೋದಿಲ್ಲ. ಈ ಸಮಯದಲ್ಲಿ ರಾಜಕೀಯ ಪ್ರವೇಶಿಸಲು ತಾವು ಆಸಕ್ತಿ ಹೊಂದಿಲ್ಲ, ನಟನಾಗಿ ದೂರ ಸಾಗಬೇಕಿದೆ ಎಂದಿದ್ದಾರೆ.