ಮಾಜಿ ರಾಷ್ಟ್ರಪತಿಯವರ ಸಾವಿನ ವದಂತಿಯನ್ನು ಅಲ್ಲಗೆಳೆದ ಅವರ ಪುತ್ರ ಅಭಿಜಿತ್ ಸಾಮಾಜಿಕ ಮಾಧ್ಯಮಗಳು

0
63

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮೆದುಳಿನಲ್ಲಿ ಆದ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಮಾಡಿದ ಶಸ್ತ್ರಚಿಕಿತ್ಸೆ ಬಳಿಕ, ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿದೆ. ವೆಂಟಿಲೇಟರ್ ಸಹಾಯವನ್ನೂ ನೀಡಲಾಗಿದೆ. ಆಸ್ಪತ್ರೆಯಲ್ಲಿ ಅವರು ಇನ್ನೂ “ಗಂಭೀರ ಸ್ಥಿತಿಯಲ್ಲೀದ್ದರೂ, ಸ್ಥಿರವಾಗಿದ್ದಾರೆ” ಎಂದು ಅವರ ಮಗ ಅಭಿಜಿತ್ ಮುಖರ್ಜಿ ಇಂದು ಹೇಳಿದ್ದಾರೆ.

“ನನ್ನ ತಂದೆ ಶ್ರೀ ಪ್ರಣಬ್ ಮುಖರ್ಜಿ ಇನ್ನೂ ಜೀವಂತವಾಗಿದ್ದಾರೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅವರು ಶೀಘ್ರ ಗುಣಮುಖರಾಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸಿ” ಎಂದು ಅಭಿಜಿತ್ ಮುಖರ್ಜಿ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

ಪ್ರಣಬ್ ಮುಖರ್ಜಿ ಅವರ ಸಾವಿನ ಬಗ್ಗೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನಿನ್ನೆಯಿಂದ ನಿರಂತರ ವದಂತಿಗಳು ಹಬ್ಬಿರುವ ನಡುವೆ, ಅಭಿಜಿತ್ ಅವರು ಇಂದು ಸ್ಪಷ್ಟೀಕರಣ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ #rippranabmukharjee No.1 ಟ್ರೆಂಡಿಂಗ್ ನಲ್ಲಿರುವುದು!

“ಮಾಜಿ ಅಧ್ಯಕ್ಷ ಪ್ರಣಬ್ ಮುಖರ್ಜಿ ಅವರ ಸ್ಥಿತಿಯು ಇನ್ನೂ ಚಿಂತಾಜನಕವಾಗಿದೆ. ಅವರು ವೆಂಟಿಲೇಟರ್ ಸಹಾಯದಲ್ಲಿದ್ದಾರೆ” ಎಂದು ಆರ್ಮಿ ರಿಸರ್ಚ್ & ರೆಫರಲ್ (ಆರ್ & ಆರ್) ಆಸ್ಪತ್ರೆ ಗುರುವಾರ ಬೆಳಿಗ್ಗೆ ತಿಳಿಸಿದೆ.

LEAVE A REPLY

Please enter your comment!
Please enter your name here