PUBg ಬ್ಯಾನ್ : ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ!

0
243
Tap to know MORE!

ಕೇಂದ್ರ ಸರ್ಕಾರವು PUBg ಗೇಮ್ ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಬೇಸರಗೊಂಡ ಇಬ್ಬರು ವಿದ್ಯಾರ್ಥಿಗಳು, ಪ್ರತ್ಯೇಕ ಘಟನೆಗಳಲ್ಲಿ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

21 ವರ್ಷದ ಐಟಿಐ ವಿದ್ಯಾರ್ಥಿ ಪ್ರೀತಮ್ ಮತ್ತು 16 ವರ್ಷದ ಒಬ್ಬ ಹುಡುಗ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳು.

ಇದನ್ನೂ ಓದಿ : ಕೊರೋನಾ ನಡುವೆ NEET ಪರೀಕ್ಷೆ – ವಿದ್ಯಾರ್ಥಿನಿ ಆತ್ಮಹತ್ಯೆ

ಐಟಿಐ ವಿದ್ಯಾರ್ಥಿಯು ಪಶ್ಚಿಮ ಬಂಗಾಳದವನಾಗಿದ್ದು, ಶುಕ್ರವಾರ ಬೆಳಗ್ಗೆ ಉಪಹಾರ ಸೇವಿಸಿದ ನಂತರ, ತನ್ನ ಕೊಠಡಿಗೆ ತೆರಳಿದ್ದಾನೆ. ಬಳಿಕ ಅಲ್ಲಿಯೇ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಪ್ರೀತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಎಷ್ಟು ಸಾರಿ ತಟ್ಟಿದರೂ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದರನ್ನು ಕರೆಸಿ ಬಾಗಿಲು ಮುರಿದು ಒಳ ಹೋಗಿದ್ದಾರೆ. ಆಗ ಆತ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ.

ತಮ್ಮ ಪುತ್ರ ಪಬ್ ಜಿ ಗೇಮ್ ಆಡಲು ಸಾಧ್ಯವಾಗದಿದ್ದಕ್ಕೆ ಅಪ್‌ಸೆಟ್ ಆಗಿದ್ದ ಎಂದು ತಾಯಿ ರತ್ನ ತಿಳಿಸಿದ್ದಾರೆ, ರಾತ್ರಿ ವೇಳೆ ಪಬ್‌ಜಿ ಗೇಮ್ ಆಡುತ್ತಿದ್ದ. ಆದರೆ ಆಟವನ್ನು ಬ್ಯಾನ್ ಮಾಡಿದ ಮೇಲೆ ಆಡಲು ಸಾಧ್ಯವಾಗದಿದ್ದಕ್ಕೆ ಬೇಸರಗೊಂಡಿದ್ದ ಪ್ರೀತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರೀತಮ್ ತಾಯಿ ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಅಹಮದಾಬಾದ್‌ನ ಆನಂದ್ ಜಿಲ್ಲೆಯ 16 ವರ್ಷದ ಬಾಲಕ ಪಬ್‌ಜಿ ಮೊಬೈಲ್ ಆಡುತ್ತಿದ್ದಕ್ಕಾಗಿ ತಂದೆಯಿಂದ ಗದರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಶಾಲಾ ಶಿಕ್ಷಕನ ಮಗನಾಗಿದ್ದು, ಆಗಸ್ಟ್ 31 ರಂದು ತನ್ನ ಮನೆಯಲ್ಲಿ ಇಟ್ಟ ಕೀಟನಾಶಕವನ್ನು ಸೇವಿಸಿದ್ದಾನೆ ಎಂದು ಸ್ಥಳೀಯ ಪೊಲೀಸರು ಹೇಳುತ್ತಾರೆ. ತಕ್ಷಣದ ಚಿಕಿತ್ಸೆಗಾಗಿ ಬಾಲಕನನ್ನು ಆನಂದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.

LEAVE A REPLY

Please enter your comment!
Please enter your name here