PUBg : ಭಾರತದಲ್ಲಿ ಇಂದಿನಿಂದ ಎಲ್ಲಾ ಸರ್ವರ್‌ಗಳೂ ಬಂದ್!

0
155
Tap to know MORE!

ನವದೆಹಲಿ : ಪಬ್ ಜೀ (PUBg) ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದ್ದು, ಇಂದಿನಿಂದ ಭಾರತದಲ್ಲಿ ಪಬ್ ಜೀ ಮೊಬೈಲ್ ಮತ್ತು ಪಬ್ ಜೀ ಮೊಬೈಲ್ ಲೈಟ್ ಎರಡೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ.

ಭಾರತದಲ್ಲಿ ಪಬ್ ಜೀ ಬ್ಯಾನ್ ಮಾಡಿದ ಬಳಿಕವೂ ಹಲವು ಬಳಕೆದಾರರರು ಇನ್ನೂ ಪಬ್ ಜೀ ಆಡುತ್ತಿದ್ದರು. ಪಬ್ ಜಿ ಮೊಬೈಲ್ ಆಯಪ್ ಗಳು ದೇಶದಲ್ಲಿ ಈಗಾಗಲೆ ತಮ್ಮ ಫೋನ್, ಟ್ಯಾಬ್ಲೆಟ್ ಮತ್ತು ಪಿ.ಸಿಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡ ಬಳಕೆದಾರರಿಗೆ ಲಭ್ಯವಿತ್ತು. ಆದರೆ, ಈಗ ಪಬ್ ಜೀ ಮೊಬೈಲ್ ಮತ್ತು ಪಬ್ ಜೀ ಲೈಟ್ ಎರಡೂ ಭಾರತದಲ್ಲಿ ಅಕ್ಟೋಬರ್ 30 (ಇಂದಿನಿಂದ) ರಿಂದ ಬಂದ್ ಆಗಲಿದೆ.

ಇದನ್ನೂ ನೋಡಿ : FAU-G – ಹೊಸ ಮೊಬೈಲ್ ಗೇಮ್ ಅನ್ನು ಘೋಷಿಸಿದ ನಟ ಅಕ್ಷಯ್ ಕುಮಾರ್!

ಅಕ್ಟೋಬರ್ 30ರಿಂದ ಎರಡೂ ಆಟಗಳಿಗೆ ಭಾರತದಲ್ಲಿ ಬಳಕೆದಾರರಿಗೆ ಎಲ್ಲಾ ಸೇವೆ ಮತ್ತು ಪ್ರವೇಶವನ್ನು ಕೊನೆಗೊಳಿಸುವುದಾಗಿ ಟೆನ್ಸೆಂಟ್ ಗೇಮ್ಸ್ ಘೋಷಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ.

ಸರಳವಾಗಿ ಹೇಳುವುದಾದರೆ, ನೀವು APK ಇನ್ ಸ್ಟಾಲ್ ಮಾಡಿಕೊಂಡರೂ PUBg ಮೊಬೈಲ್ ಪ್ಲೇ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

LEAVE A REPLY

Please enter your comment!
Please enter your name here