ಶೀಘ್ರದಲ್ಲೇ ಭಾರತಕ್ಕೆ ಹಿಂತಿರುಗಲಿದೆ PUBg ?

0
162
Tap to know MORE!

ಕೇಂದ್ರ ಸರ್ಕಾರವು PUBG ಮೊಬೈಲ್ ಗೇಮ್ ಸೇರಿದಂತೆ 118 ಚೀನಾ ಜೊತೆಗೆ ಸಂಬಂಧ ಇರುವ ಆಪ್‌ಗಳನ್ನು ಕಳೆದ ವಾರ ನಿಷೇಧಿಸಿತ್ತು. ಆದರೆ ಭಾರತದಲ್ಲಿ ತನ್ನ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ PUBg, ಭಾರತಕ್ಕೆ ಹಿಂತಿರುಗಲು ಪ್ರಯತ್ನಿಸುತ್ತಿದೆ.

ಈ ಕುರಿತಂತೆ ಕಂಪನಿಯ ಹೇಳಿಕೆಯ ಪ್ರಕಾರ, “ಸಂಸ್ಥೆಯು ಇನ್ನು ಮುಂದೆ ಟೆನ್ಸೆಂಟ್ ಗೇಮ್ಸ್‌ ನೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಲು ಮುಂದಾಗಿದೆ” ಎಂದು ಘೋಷಿಸಿದೆ. ಪ್ರಮುಖವಾಗಿ ಭಾರತದಲ್ಲಿ, PUBG ಸಂಸ್ಥೆ, ದೇಶದ ಕಾನೂನುಗಳನ್ನು ಗೌರವಿಸಿ, ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದೆ.

PUBg ಬ್ಯಾನ್ : ಮನನೊಂದ ಇಬ್ಬರು ಆತ್ಮಹತ್ಯೆ

“ಆಟಗಾರರ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯು ಕಂಪನಿಗೆ ಮೊದಲ ಆದ್ಯತೆಯಾಗಿರುವುದರಿಂದ ಸರ್ಕಾರವು ಕೈಗೊಂಡ ಕ್ರಮಗಳನ್ನು ಪಬ್‌ಜಿ ಕಾರ್ಪೊರೇಷನ್ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಗೌರವಿಸುತ್ತದೆ. ಭಾರತೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸುವಾಗ ಗೇಮರ್ಸ್‌ಗಳಿಗಾಗಿ ಮತ್ತೊಮ್ಮೆ ಅಖಾಡಕ್ಕೆ ಇಳಿಯಲು ಅನುವು ಮಾಡಿಕೊಡುವ ಪರಿಹಾರವನ್ನು ಕಂಡುಹಿಡಿಯಲು ಭಾರತ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಸಂಸ್ಥೆಯು ಆಶಿಸಿದೆ”

“ಕಂಪನಿಯು ಮುಂದಿನ ದಿನಗಳಲ್ಲಿ ಭಾರತಕ್ಕೆ ತನ್ನದೇ ಆದ PUBG ಅನುಭವವನ್ನು ಒದಗಿಸುವ ಮಾರ್ಗಗಳನ್ನು ಅನ್ವೇಷಿಸುತ್ತಿರುವುದರಿಂದ, ತನ್ನ ಅಭಿಮಾನಿಗಳಿಗೆ ಸ್ಥಳೀಯ ಮತ್ತು ಆರೋಗ್ಯಕರ ಆಟದ ವಾತಾವರಣವನ್ನು ಉಳಿಸಿಕೊಳ್ಳುವ ಮೂಲಕ ಅದನ್ನು ಮಾಡಲು ಬದ್ಧವಾಗಿದೆ” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕೆಲವು ದಿನಗಳ ಹಿಂದೆ ನಿಷೇಧಿಸಲಾಗಿದ್ದ PUBg, ಭಾರತದಲ್ಲಿ ಪುನರಾಗಮನ ಮಾಡಲು ಸಹಕಾರಿಯಾಗುವ ಮಹತ್ವದ ನಿರ್ಧಾರ ಇದು ಎನ್ನಲಾಗಿದೆ.

PUBg ದಕ್ಷಿಣ ಕೊರಿಯಾದ ಗೇಮಿಂಗ್ ಕಂಪನಿಯಾದ PUBG ಕಾರ್ಪೊರೇಷನ್ ಒಡೆತನದಲ್ಲಿದೆ ಮತ್ತು ಅದೇ ಸಂಸ್ಥೆ ಅಭಿವೃದ್ಧಿಪಡಿಸಿದೆ.

LEAVE A REPLY

Please enter your comment!
Please enter your name here