BIG NEWS : PUBg ಮೊಬೈಲ್‌ಗೆ ಸಿಕ್ತು ಕೇಂದ್ರ ಸರ್ಕಾರದ ಅನುಮೋದನೆ – ಈಗಲೇ ನೋಂದಣಿ ಮಾಡಿಸಿ!

0
105
Tap to know MORE!

ಸಂಸ್ಥೆಯು ಮೊದಲೇ ದೃಢೀಕರಿಸಿದಂತೆ, ಕ್ರಾಫ್ಟನ್ – PUBg ಕಾರ್ಪೊರೇಷನ್, ತನ್ನ ಭಾರತೀಯ ಅಂಗಸಂಸ್ಥೆಯನ್ನು “PUBg India Pvt Ltd” ಎಂಬ ಶೀರ್ಷಿಕೆಯಲ್ಲಿ ಅಧಿಕೃತವಾಗಿ ನೋಂದಾಯಿಸಿದೆ. ಕಂಪನಿಯು ಭಾರತದ ಐಟಿ ರಾಜಧಾನಿ – ಬೆಂಗಳೂರಿನಲ್ಲಿ ನೆಲೆಸಿದೆ.

ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವೂ ಸಹ PUBg India Pvt Ltd ಗೆ ತನ್ನ ಅನುಮೋದನೆಯನ್ನು ನೀಡಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಪಬ್ಜಿ ಇಂಡಿಯಾ ಪ್ರೈ. ಲಿಮಿಟೆಡ್ ಅನ್ನು, ಕಂಪನಿಗಳ ರಿಜಿಸ್ಟ್ರಾರ್ ಅಡಿಯಲ್ಲಿ ಖಾಸಗಿ ಒಡೆತನದ ಕಂಪನಿ ಎಂದು ನಮೂದಿಸಿದೆ. ನವೆಂಬರ್ 21, 2020 ರಂದು ಅನುಮೋದನೆ ಸಿಕ್ಕಿದ್ದು, ಅಂಗಸಂಸ್ಥೆಯ ಅಧಿಕೃತ ಬಂಡವಾಳವನ್ನು ₹15,00,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

PUBG ಮೊಬೈಲ್ ಇಂಡಿಯಾ ಇನ್ನು ಕೆಲವೇ ವಾರಗಳಲ್ಲಿ ಭಾರತೀಯ ಬಳಕೆದಾರರಿಗೆ ಲಭ್ಯವಾಗಲಿದೆ. ತನ್ನ ಅಧಿಕೃತ ವೆಬ್‌ಸೈಟ್ ಸಹ ಪುನರ್ನಿರ್ಮಾಣಗೊಳ್ಳುತ್ತಿದ್ದು, ಇನ್ನಷ್ಟು ಹೊಸ ವಿವರಗಳನ್ನು ಪ್ರತಿಬಿಂಬಿಸುತ್ತಿದೆ.

ಈಗಲೇ ನೋಂದಾಯಿಸಿಕೊಳ್ಳಿ..!

PUBg ಆಟವನ್ನು ಭಾರತದಲ್ಲಿ ಅಧಿಕೃತವಾಗಿ ಪುನರಾರಂಭಿಸುವ ಮೊದಲು, PUBG ಕಾರ್ಪೊರೇಷನ್ ತನ್ನ ಪೂರ್ವ-ನೋಂದಣಿ ಪ್ರಕ್ರಿಯೆಯನ್ನು ತೆರೆದಿದೆ. ಭಾರತದಲ್ಲಿ PUBG ಮೊಬೈಲ್‌ನ ಪೂರ್ವ-ನೋಂದಣಿಗಳು ಈಗ ಟ್ಯಾಪ್‌ಟಾಪ್ (TapTap) ಅಪ್ಲಿಕೇಶನ್‌ನಲ್ಲಿ ಲೈವ್ ಆಗಿವೆ. ಆದಾಗ್ಯೂ, PUBG ಮೊಬೈಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಪೂರ್ವ-ನೋಂದಣಿ ಪ್ರಕ್ರಿಯೆಯನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಆದರೆ ನೀವು ಪೂರ್ವ-ನೋಂದಣಿ ಪ್ರಕ್ರಿಯೆಯಲ್ಲಿ ಆಸಕ್ತಿ ಹೊಂದಿದ್ದರೆ, TapTap ಅಪ್ಲಿಕೇಶನ್‌ ಮೂಲಕ ನೀವು ಮಾಡಬಹುದು.

ಪೂರ್ವ ನೋಂದಣಿ ಮಾಡುವುದು ಹೇಗೆ?

ಟ್ಯಾಪ್‌ಟಾಪ್ ವೆಬ್‌ಸೈಟ್ ಕ್ಲಿಕ್ ಮಾಡಿ, ಅಲ್ಲಿ ಸಿಗುವ ಎಪಿಕೆ ಲಿಂಕ್ ಮೂಲಕ ಟ್ಯಾಪ್‌ಟಾಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
– ಲಾಗಿನ್ ಆಗಿ ಅಥವಾ ಹೊಸ ಟ್ಯಾಪ್‌ಟಾಪ್ ಖಾತೆಯನ್ನು ತೆರೆಯಿರಿ.
– ಲಾಗ್ ಇನ್ ಮಾಡಿದ ನಂತರ, ಹುಡುಕಾಟ ಆಯ್ಕೆಯಲ್ಲಿ PUBG ಮೊಬೈಲ್ ಇಂಡಿಯಾವನ್ನು ಹುಡುಕಿ ಮತ್ತು ಆಟದ ಮೇಲೆ ಕ್ಲಿಕ್ ಮಾಡಿ.
– ಈಗ, ‘ಪೂರ್ವ ನೋಂದಣಿ’ (pre-registration) ಆಯ್ಕೆಯ ಮೇಲೆ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here