ಸಾರ್ವಜನಿಕ ಶೌಚಾಲಯ ಬಳಕೆ ಡೇಂಜರ್

0
86

ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಕುರಿತು ನೂತನ ಅಧ್ಯಯನಗಳು ನಡೆಯುತ್ತಿದೆ ಇದೀಗ ಚೀನಾದ ಗ್ಲಾಸ್ಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಶೌಚಾಲಯ ಬಳಸುವುದರಿಂದಲೂ ಕೊರೋನಾ ಸೋಂಕು ತಗುಲುತ್ತದೆ ಎಂದು ತಿಳಿಸಿದ್ದಾರೆ.

ಸಂಶೋಧಕ ಡಾ. ಕ್ಸಿಯಾಂಗ್‌ಡಾಂಗ್ ಲಿಯು ಅವರು, ಸಾರ್ವಜನಿಕ ಶೌಚಾಲಯಗಳು ಕೊರೋನಾ ಸೂಪರ್‌ಸ್ಪ್ರೆಡರ್ ತಾಣಗಳಾಗಿ ಪರಿಣಮಿಸಬಹುದು. ಮೂತ್ರ ವಿಸರ್ಜನೆ ಮಾಡುವುದು ಅನಿಲ ಮತ್ತು ದ್ರವ ಸಂಪರ್ಕಸಾಧನಗಳ ನಡುವಿನ ಪರಸ್ಪರ ಕ್ರಿಯೆಯನ್ನು ಒಳಗೊಂಡಿರುತ್ತದೆ. ಕೆಲವೇ ಸೆಕೆಂಡ್ ಗಳಲ್ಲಿ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

ಸಾರ್ವಜನಿಕ ಶೌಚಾಲಯಲ್ಲಿ ಮೂತ್ರ ವಿಸರ್ಜನೆ ಮಾಡಿದರೂ ಕೊರೋನಾ ಸೋಂಕು ತಗುಲುವ ಸಾಧ್ಯತೆ ಇದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಉತ್ತಮ ಎಂದು ಹೇಳಲಾಗಿದೆ. ಸಂಶೋಧಕರ ಪ್ರಕಾರ, ಲಿಕ್ವಿಡ್ ನಿಂದ ಒಳಗೊಂಡಿರುವ ಮೂತ್ರದಿಂದ ಬಿಡುಗಡೆಯಾಗುವ ಕಣಗಳು ಕೊರೋನಾಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here