ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್. ಆರ್ ರಂಗನಾಥ್ ಅವರು ಲೋಕ ಶಿಕ್ಷಣ ಟ್ರಸ್ಟ್ ಸಲಹೆಗಾರರಾಗಿ ನೇಮಕರಾಗಿದ್ದಾರೆ. ಲೋಕ ಶಿಕ್ಷಣ ಟ್ರಸ್ಟ್ ಸಂಯುಕ್ತ ಕರ್ನಾಟಕ ದಿನಪತ್ರಿಕೆಯನ್ನು ಹೊರತರುತ್ತದೆ. ಸಂಯುಕ್ತ ಕರ್ನಾಟಕ ಮಾತ್ರವಲ್ಲದೆ ಕರ್ಮವೀರ,ಕಸ್ತೂರಿ ಕೂಡ ಇದೇ ಲೋಕ ಶಿಕ್ಷಣ ಟ್ರಸ್ಟ್ ನಿಂದ ಪ್ರಕಟವಾಗುತ್ತದೆ.
ರಂಗನಾಥ್ ಅವರು ಕನ್ನಡ ಪ್ರಭ ಮತ್ತು ಸುವರ್ಣವಾಹಿನಿಯ ಸಂಪಾದಕರಾಗಿದ್ದರು. ಪಬ್ಲಿಕ್ ಟಿವಿ ಕನ್ನಡ ಸುದ್ದಿ ವಾಹಿನಿಯ ಸಂಪಾದಕರಾಗಿರುವ ಹೆಚ್. ಆರ್. ರಂಗನಾಥ್ ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷರಾಗಿದ್ದಾರೆ. ಟಿವಿ ಮಾಧ್ಯಮದಲ್ಲಿ ಬ್ಯುಸಿಯಾಗಿರುವ ಅವರು ಲೋಕ ಶಿಕ್ಷಣ ಟ್ರಸ್ಟ್ ಸಲಹೆಗಾರರಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.