ನಾಳೆ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಲಿರುವ ಮೋದಿ!

0
123
Tap to know MORE!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸ್ವಚ್ಛ ಭಾರತ್ ಮಿಷನ್‌ನ ಸಂವಾದಾತ್ಮಕ ಅನುಭವ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಸಂದರ್ಭದಲ್ಲಿ, ಎಪ್ರಿಲ್ 10, 2017 ರಂದು ಮಹಾತ್ಮ ಗಾಂಧಿಯವರಿಗೆ ಗೌರವಾತ್ಮಕವಾಗಿ, ಪ್ರಧಾನಮಂತ್ರಿ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ (ಆರ್‌ಎಸ್‌ಕೆ) ವನ್ನು ಘೋಷಿಸಿದ್ದರು.

ಆರ್‌ಎಸ್‌ಕೆ ಸ್ಥಾಪನೆಯಾಗುವುದರಿಂದ, ಭವಿಷ್ಯದ ಪೀಳಿಗೆಗೆ, ಸ್ವಚ್ಛ ಭಾರತ್ ಮಿಷನ್‌ನ ಯಶಸ್ವಿ ಪ್ರಯಾಣವನ್ನು ಪರಿಚಯಿಸುತ್ತದೆ. ಆರ್‌ಎಸ್‌ಕೆ ಯಲ್ಲಿ ಸ್ವಚ್ಛತೆ ಮತ್ತು ಅದಕ್ಕೆ ಸಂಬಂಧಿತ ಅಂಶಗಳ ಬಗ್ಗೆ ಮಾಹಿತಿ, ಅರಿವು ಮತ್ತು ಶಿಕ್ಷಣವನ್ನು ಜನರಿಗೆ ನೀಡುತ್ತದೆ. ಅದರೊಂದಿಗೆ, ಸಂಯೋಜಕ ಕಲಿಕೆ, ಉತ್ತಮ ಅಭ್ಯಾಸಗಳು, ಜಾಗತಿಕ ಮಾನದಂಡಗಳು, ಯಶಸ್ಸಿನ ಕಥೆಗಳು ಮತ್ತು ಇನ್ನಿತರ ವಿಷಯಾಧಾರಿತ ಸಂದೇಶಗಳ ಮೂಲಕ ಸಂವಾದಾತ್ಮಕ ಸ್ವರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಸ್ವಚ್ಛ ಭಾರತ್ ಮಿಷನ್ ಭಾರತದಲ್ಲಿ ಗ್ರಾಮೀಣ ನೈರ್ಮಲ್ಯವನ್ನು ಮಾರ್ಪಡಿಸಿದೆ ಮತ್ತು 55 ಕೋಟಿಗೂ ಹೆಚ್ಚು ಜನರ ನಡವಳಿಕೆಗಳನ್ನು ಬಯಲು ಶೌಚದಿಂದ ಶೌಚಾಲಯ ಬಳಸುವವರೆಗೆ ಬದಲಾಯಿಸಿದೆ. ಇದಕ್ಕಾಗಿ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚಿನ ಮೆಚ್ಚುಗೆಯನ್ನು ಪಡೆದಿದೆ ಮತ್ತು ಉಳಿದ ದೇಶಗಳು ಇದೇ ಮಾರ್ಗವನ್ನು ಅನುಸರಿಸುವಂತೆ ಆಗಿದೆ.

ರಾಜಘಾಟ್ ಬಳಿಯ ರಾಷ್ಟ್ರೀಯ ಸ್ವಚ್ಛತಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಪಿಎಂ ಮೋದಿ ಅವರು ದೆಹಲಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ಆರ್‌ಎಸ್‌ಕೆ ಸಭಾಂಗಣದಲ್ಲಿ ಸಂವಾದ ನಡೆಸಲಿದ್ದಾರೆ. ಆ ವಿದ್ಯಾರ್ಥಿಗಳು 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರ ನಂತರ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣವನ್ನು ನೀಡಲಿದ್ದಾರೆ.

ಸ್ವಚ್ಛ ಭಾರತ ಮಿಷನ್ ಈಗ ಎರಡನೇ ಹಂತದಲ್ಲಿದೆ. ದೇಶದ ಹಳ್ಳಿಗಳನ್ನು ಬಯಲು ಶೌಚ ಮುಕ್ತದಿಂದ (ಒಡಿಎಫ್) ನಿಂದ ಒಡಿಎಫ್ ಪ್ಲಸ್‌ಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ. ಒಡಿಎಫ್ ಸ್ಥಾನಮಾನವನ್ನು ಉಳಿಸಿಕೊಳ್ಳಲು ಮತ್ತು ಎಲ್ಲರಿಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಖಾತರಿಪಡಿಸುವ ಬಗ್ಗೆ ಬಲವಾದ ಗಮನವನ್ನು ಹೊಂದಿದೆ.

LEAVE A REPLY

Please enter your comment!
Please enter your name here