ಆಬುಧಾಬಿ : ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ತಂಡವು 10ರನ್ ಗಳ ಅಂತರದಿಂದ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಸವಾಲಿಗೆ ಇಳಿದ ಆರ್ ಸಿ ಬಿ 5 ವಿಕೆಟ್ ನಷ್ಟಕ್ಕೆ 164 ರ ಗುರಿ ಬಿಟ್ಟು ಕೊಟ್ಟಿತ್ತು. ಆರ್ ಸಿ ಬಿ ನೀಡಿದ ಗುರಿಯನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಲಾರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ 153 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನನುಭವಿಸಿತು.
RCB ಮತ್ತು SRH ನಡುವಿನ ಪಂದ್ಯದ ಪ್ರಮುಖ ಅಂಕಿ ಅಂಶಗಳು
- ಆರನ್ ಫಿಂಚ್ ಐಪಿಎಲ್ನಲ್ಲಿ ತಮ್ಮ 8 ನೇ ತಂಡದ ಪರ ಆಡುತ್ತಿದ್ದಾರೆ
2010 – ರಾಜಸ್ಥಾನ ರಾಯಲ್ಸ್
2011 ರಿಂದ 2012 – ಡೆಲ್ಲಿ ಕ್ಯಾಪಿಟಲ್ಸ್
2013 – ಪುಣೆ ವಾರಿಯರ್ಸ್
2014 – ಸನ್ ರೈಸರ್ಸ್ ಹೈದರಾಬಾದ್
2015 – ಮುಂಬೈ ಇಂಡಿಯನ್ಸ್
2016 ರಿಂದ 2017 – ಗುಜರಾತ್ ಲಯನ್ಸ್
2018 – ಕಿಂಗ್ಸ್ ಇಲೆವೆನ್ ಪಂಜಾಬ್
2020 – ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಐಪಿಎಲ್ನಲ್ಲಿ ಆರ್ಸಿಬಿ ತನ್ನ 59ನೇ ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿತು.(ದೇವದತ್ ಪಡಿಕ್ಕಲ್ – ಆರೋನ್ ಫಿಂಚ್). ಮುಂಬೈ 47, ಪಂಜಾಬ್ 44 ನಂತರದ ಸ್ಥಾನದಲ್ಲಿದೆ.
- ದೇವದತ್ ಪಡಿಕ್ಕಲ್ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು. ಹಾಗೆಯೇ ಅವರು ಪ್ರಥಮ ದರ್ಜೆ , ಲಿಸ್ಟ್-ಎ ಕ್ರಿಕೆಟ್ ಮತ್ತು ಟಿ 20 ಕ್ರಿಕೆಟ್ನ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದಾರೆ.
- ಐಪಿಎಲ್ ಚೊಚ್ಚಲ ಪಂದ್ಯದಲ್ಲಿ 50+ ಸ್ಕೋರ್ ಮಾಡಿದ ಕೊನೆಯ ಆಟಗಾರ ಸ್ಯಾಮ್ ಬಿಲ್ಲಿಂಗ್ಸ್ (2016 ರಲ್ಲಿ) ಹಾಗೂ ಈ ಸಾಧನೆ ಮಾಡಿದ ಕೊನೆಯ ಭಾರತೀಯ ಕೇದಾರ ಜಾಧವ್ (2010 ರಲ್ಲಿ)
- ಚೊಚ್ಚಲ ಐಪಿಎಲ್ ಇನ್ನಿಂಗ್ಸ್ನಲ್ಲಿ 50+ ಸ್ಕೋರ್ ಮಾಡಿದ ಎರಡನೇ ಕಿರಿಯ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ (ಡಿ ಎಸ್ ಗೋಸ್ವಾಮಿ (2008) 19 ವರ್ಷ 1 ದಿನ ಅತ್ಯಂತ ಕಿರಿಯ)
- ಐಪಿಎಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡವು, ಮೊತ್ತ ರಕ್ಷಿಸುವಾಗ ಕೊನೆಯ ಐದು ಓವರ್ಗಳಲ್ಲಿ ಎಂಟು ವಿಕೆಟ್ಗಳನ್ನು ಪಡೆದ ಕೇವಲ ಎರಡನೇ ಸನ್ನಿವೇಶ (ಮೊದಲನೆಯದು ಡೆಲ್ಲಿ ಕ್ಯಾಪಿಟಲ್ಸ್ vs ಹೈದರಾಬಾದ್, 2019)
- ಐಪಿಎಲ್ನಲ್ಲಿ ಆರ್ಸಿಬಿಯು ನಾಲ್ಕು ವರ್ಷಗಳ ಬಳಿಕ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆ.(2017 ಹೈದರಾಬಾದ್ ವಿರುದ್ಧ, 2018 ಕೆಕೆಆರ್ ವಿರುದ್ಧ, 2019 ಸಿಎಸ್ಕೆ ವಿರುದ್ಧ ಸೋತಿತ್ತು)