ಬಿಜೆಪಿ ಪಕ್ಷ ಸೇರಿರುವುದು ನನ್ನ ಉತ್ತಮ ನಡೆಯಾಗಿದೆ: ಎಸ್.ಎಂ.ಕೃಷ್ಣ

0
191
Tap to know MORE!

“ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗಿನ ನನ್ನ ಸಂಬಂಧ ಬಹಳ ಉತ್ತಮವಾಗಿದೆ. ನಾನು ಬಿಜೆಪಿ ಪಕ್ಷವನ್ನು ಸೇರುವ ಮೂಲಕ ಒಳ್ಳೆಯದನ್ನೇ ಮಾಡಿದ್ದೇನೆ. ಈ ನಿರ್ಧಾರದ ಬಗ್ಗೆ ನನಗೆ ಸಂತೋಷವಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಎಸ್ ಎಂ ಕೃಷ್ಣ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕರ ಹಿತದೃಷ್ಟಿಯಿಂದ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಇತರರನ್ನೂ ತಮ್ಮೊಂದಿಗೆ ಸೇರಿಕೊಂಡಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು. “2024 ರಲ್ಲಿ ಮೋದಿಯವರು ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾಗುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಂಗ್ರೆಸ್ ಈಗಲೂ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿ ಬಿಜೆಪಿ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮೋದಿಯವರು ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.

ಸಂದರ್ಶನವೊಂದರಲ್ಲಿ, ಒಂದು ಪಕ್ಷವಾಗಿ ಬಿಜೆಪಿಗೆ ವಿಶಿಷ್ಟ ಶಕ್ತಿ ಇದೆ ಎಂದು ಅವರು ಹೇಳಿದರು. “ಮೋದಿಯವರ ಸ್ಪಷ್ಟ ದೃಷ್ಟಿ ಮತ್ತು ಇತರರೊಂದಿಗೆ ಉತ್ತಮವಾಗಿ ವರ್ತಿಸುವ ಅವರ ಗುಣದಿಂದಾಗಿ, ದೇಶವು ಈಗ ಉತ್ತಮ ಆರ್ಥಿಕ ಮತ್ತು ರಾಜಕೀಯ ವಾತಾವರಣವನ್ನು ಹೊಂದಿದೆ. ಪ್ರಧಾನಮಂತ್ರಿಯಾಗಲಿ ಅಥವಾ ಬಿಜೆಪಿ ಸರ್ಕಾರವಾಗಲಿ ಯಾವುದೇ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುವುತ್ತಿಲ್ಲ. ಮೋದಿ ದೇಶದ ಒಳಿತಿಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ಆಳವಾಗಿ ಯೋಚಿಸುತ್ತಾರೆ ಮತ್ತು ಇತರರಿಂದ ಸಲಹೆಗಳನ್ನು ಪಡೆಯುತ್ತಾರೆ. ಕೊನೆಯಲ್ಲಿ, ಅವರು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅದಲ್ಲದೆ, ಏನಾದರೂ ತಪ್ಪು ಸಂಭವಿಸಿದಲ್ಲಿ, ಅವರು ಎಂದಿಗೂ ಜನರನ್ನು ದೂಷಿಸುವುದಿಲ್ಲ” ಎಂದರು.

ಮಹಾತ್ಮ ಗಾಂಧಿ ಮತ್ತು ಸುಭಾಸ್ ಚಂದ್ರ ಬೋಸ್ ಅವರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆಂತರಿಕ ಪ್ರಜಾಪ್ರಭುತ್ವವು ಈ ಸಮಯದ ಅಗತ್ಯವಾಗಿದೆ ಎಂದು ಕೃಷ್ಣ ಅಭಿಪ್ರಾಯಪಟ್ಟರು. ಅದನ್ನು ಮಾದರಿಯಾಗಿ ತೆಗೆದುಕೊಳ್ಳುವ ಮೂಲಕ, ರಾಜಕೀಯ ಪಕ್ಷಗಳು, ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ, ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here