ಖ್ಯಾತ ಗಾಯಕ ಎಸ್‌ಪಿ‌ ಬಾಲಸುಬ್ರಹ್ಮಣ್ಯಂ ಗೆ ಕೊರೋನಾ

1
357
Tap to know MORE!

ಖ್ಯಾತ ಗಾಯಕ, ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು (ಆಗಸ್ಟ್ 5) ಆಸ್ಪತ್ರೆಯಿಂದ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಅವರು ಜ್ವರ, ಶೀತ ಮತ್ತು ಎದೆ ನೋವು ಹೊಂದಿದ್ದರಿಂದ ಸ್ವಯಂ ಪ್ರೇರಿತರಾಗಿ, ಕೋವಿಡ್ -19 ಗೆ ಪರೀಕ್ಷಿಸಲು ಬಯಸಿದ್ದರು ಎಂದು ಅವರು ಬಹಿರಂಗಪಡಿಸಿದರು. ಪರೀಕ್ಷಾ ಫಲಿತಾಂಶದಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ವೈದ್ಯರು ಹೋಮ್ ಕ್ವಾರಂಟೈನ್ ನಲ್ಲಿರಲು ಸೂಚಿಸಿದ್ದರು. ಆದರೆ, ಕುಟುಂಬ ಸದಸ್ಯರ ಕಳವಳದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಈಗ ಅವರ ಜ್ವರ ಕಡಿಮೆಯಾಗಿದೆ. ಆದರೆ ಶೀತವಿದೆ. ರೋಗಲಕ್ಷಣಗಳು ಎರಡು ದಿನಗಳಲ್ಲಿ ಹೋಗುತ್ತದೆ ಎಂಬ ಭರವಸೆ ಇದೆ. ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ ಮತ್ತು ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

Posted by S. P. Balasubrahmanyam on Tuesday, 4 August 2020

1 COMMENT

LEAVE A REPLY

Please enter your comment!
Please enter your name here