ಸ್ಥಳೀಯ ಸಬ್ಇನ್ಸ್ಪೆಕ್ಟರ್ ನೇತೃತ್ವದ ಪೊಲೀಸರ ಗುಂಪೊಂದು ಅವಮಾನಿಸಿದ್ದರಿಂದ, 42 ವರ್ಷದ ಸಾಧು ಸರವಾಣನ್ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಗ್ರಾಮದ ಸಮೀಪದ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಧು ತನ್ನ ಸ್ನೇಹಿತರಿಗೆ ಕಳುಹಿಸಿದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಒಂದು ವೀಡಿಯೊದಲ್ಲಿ, ಸಬ್ ಇನ್ಸ್ಪೆಕ್ಟರ್ ಆಂಥೋನಿ ಮೈಕೆಲ್ ಎನ್ನುವವರು ಅವರನ್ನು ಅವಮಾನಿಸಿದ್ದರಿಂದ, ಅವರ “ಖಿನ್ನತೆಗೆ” ಒಳಗಾಗಿದ್ದರು ಎಂದು ಹೇಳಿದ್ದಾರೆ.
ಮೈಕೆಲ್ ತೀವ್ರವಾಗಿ ಥಳಿಸಿದ್ದರಿಂದ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಸಾವಿಗೆ ಬೇರೆ ಯಾರೂ ಕಾರಣವಲ್ಲ ಎಂದು ಸಾಧು ವೀಡಿಯೋವೊಂದರಲ್ಲಿ ಹೇಳಿದ್ದಾರೆ.
ತನಗೆ ಆಗಿರುವ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭೂತದ ರೂಪದಲ್ಲಿ ಮರಳಿ ಬರುತ್ತೇನೆ ಎಂದು ಸಾಧು ಹೇಳಿದ್ದಾರೆ ಎನ್ನಲಾಗಿದೆ.