ಸಂಜಯ್ ದತ್ ಆಸ್ಪತ್ರೆಗೆ ದಾಖಲು – “ನಾನು ಚೆನ್ನಾಗಿದ್ದೇನೆ” ಎಂದು ಟ್ವೀಟ್

0
155
Tap to know MORE!

ನಟ ಸಂಜಯ್ ದತ್ ಅವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ, ಶೀಘ್ರದಲ್ಲೇ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಅವರನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಿದಾಗ, ವರದಿ “ನೆಗೆಟಿವ್” ಬಂದಿದ್ದು, ಸ್ವಲ್ಪ ನಿರಾಳವಾಗಿ ದ್ದಾರೆ. ಈ ಕುರಿತು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಎನ್‌ಐ ಪ್ರಕಾರ, ಸಂಜಯ್ ಅವರನ್ನು ವೈದ್ಯಕೀಯ ವೀಕ್ಷಣೆಗಾಗಿ ಆಸ್ಪತ್ರೆಯಲ್ಲಿ ಇರಿಸಲಾಗುವುದು ಮತ್ತು ಅವರು ‘ಸಂಪೂರ್ಣವಾಗಿ ಉತ್ತಮವಾಗಿದ್ದಾರೆ’.

ಇದನ್ನೂ ನೋಡಿ : ಕೆಜಿಎಫ್ 2 ಚಿತ್ರದಲ್ಲಿ ಅಧೀರನಾಗಿ ಸಂಜಯ್ ದತ್ – ಫಸ್ಟ್ ಲುಕ್‌ಗೆ ಎಲ್ಲರೂ ಫಿದಾ

ಈ ಬಗ್ಗೆ ಕೆಲ ಸಮಯದ ಬಳಿಕ ಟ್ವಿಟ್ಟರ್ ನಲ್ಲಿ ಸಂಜಯ್ ದತ್ ಹಂಚಿಕೊಂಡರು. “ನಾನು ಆರಾಮವಾಗಿ ಇದ್ದೇನೆ. ಕೋವಿಡ್ ಪರೀಕ್ಷಾ ವರದಿಯೂ ನೆಗೆಟಿವ್ ಬಂದಿದೆ. ಇನ್ನೆರಡು ದಿನದೊಳಗೆ ಮನೆಗೆ ಮರಳುತ್ತೇನೆ” ಎಂದಿದ್ದಾರೆ

LEAVE A REPLY

Please enter your comment!
Please enter your name here